ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಕೀಪಿಂಗ್ ಚಾಕಚಕ್ಯತೆಯನ್ನು ಮೀರಿಸುವಂತಾ ಆಟಗಾರ ಇನ್ನೊಬ್ಬನಿಲ್ಲ ಎಂದರೇ ತಪ್ಪಾಗಲಾರದು.
ಆದರೆ ಭಾರತದ ಎ ತಂಡದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಭವಿಷ್ಯದ ಎಂಎಸ್ ಧೋನಿ ಎಂದರೆ ತಪ್ಪಾಗಲಾರದು. ಹೌದು ಧೋನಿಯಂತೆ ಸ್ಟಂಪ್ ಮಾಡುವ ಕಲೆಯನ್ನು ಇಶಾನ್ ಕರಗತ ಮಾಡಿಕೊಂಡಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ರೆಡ್ ತಂಡದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಇಂಡಿಯಾ ಬ್ಲೂ ತಂಡದ ಆಟಗಾರನನ್ನು ಧೋನಿಯಂತೆಯೇ ಅದ್ಭುತವಾಗಿ ರನ್ ಔಟ್ ಮಾಡಲು ಪ್ರಯತ್ನಿಸಿದ ರೀತಿಗೆ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಾಲ್ ಹತ್ತಿರ ಬರುತ್ತಿದ್ದಂತೆ ಒಂದು ಕೈನಿಂದ ಗ್ಲೌಸ್ ಕಿತ್ತೆಸೆದು ಬಾಲ್ ಹಿಡಿದು ಸ್ಟಂಪ್ಸ್ ನೋಡದೇ ಕಾಲುಗಳ ಮಧ್ಯದಿಂದ ಹೊಡೆದಿದ್ದಾರೆ. ಆದರೆ ಅಷ್ಟರಲ್ಲೇ ಬ್ಯಾಟ್ಸ್ ಮನ್ ಕ್ರೀಸ್ ನೊಳಗೆ ಬಂದ್ದಿದ್ದರಿಂದ ಕಿಶನ್ ಪ್ರಯತ್ನ ವಿಫಲವಾಗಿದೆ.
ಆದರೆ ಇಶಾನ್ ಔಟ್ ಮಾಡಲು ವಿಫಲರಾದರೂ ಅವರ ಪ್ರಯತ್ನಕ್ಕೆ ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಡೊಮೆಸ್ಟಿಕ್ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics