ಲಂಡನ್: ಇಂಗ್ಲೆಂಡ್ ನೆಲದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೋಲನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ತಪ್ಪು ಮಾಹಿತಿ ನೀಡಿದ ಕೋಚ್ ರವಿಶಾಸ್ತ್ರಿ ಇದೀಗ ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೌಥ್ಯಾಂಪ್ಟನ್ ನಲ್ಲಿ ನಡೆ ನಾಲ್ಕನೇ ಟೆಸ್ಟ್ ಪಂದ್ಯದ ಸೋಲಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಧಾನ ಕೋಚ್ ರವಿಶಾಸ್ತ್ರಿ, ಹಾಲಿ ಟೀಂ ಇಂಡಿಯಾ ಈ ಹಿಂದಿನ 15-20 ವರ್ಷಗಳ ತಂಡಕ್ಕಿಂತ ಉತ್ತಮವಾಗಿದೆ. ವಿದೇಶಗಳಲ್ಲಿ ಯಶಸ್ವೀ ಪ್ರದರ್ಶನ ನೀಡುತ್ತಿದೆ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ತಪ್ಪು ಮಾಹಿತಿ ನೀಡಿದ ರವಿಶಾಸ್ತ್ರಿಗೆ ಇದೀಗ ಟೀಂ ಮಾಜಿ ಕ್ರಿಕೆಟಿಗ ಹಾಗೂ ಭಾರತದ ಕ್ರಿಕೆಟ್ ದಂತಕಥೆ ಕಥೆ ಕಿವಿಹಿಂಡಿದ್ದಾರೆ.
ಗವಾಸ್ಕರ್ ಹೇಳಿರುವಂತೆ, ಶ್ರೀಲಂಕಾದಲ್ಲಿ ಭಾರತದ ಯಾವುದೇ ತಂಡ ಕೂಡ ಟೆಸ್ಟ್ ಸರಣಿ ಜಯಿಸಿಲ್ಲ. ಆದರೆ ಆ ತಂಡಗಳೇನೂ ಕಳಪೆಯಾಗಿರಲಿಲ್ಲ. ಆ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗಳನ್ನು ಜಯಿಸಿದೆ. ಅಂತೆಯೇ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳನ್ನು ಜಯಿಸಿದೆ. ಕೊನೆಯ ಬಾರಿಗೆ ರಾಹುಲ್ ದ್ರಾವಿಡ್ ನೇತೃತ್ವದ ತಂಡ 2007ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಟೆಸ್ಚ್ ಸರಣಿ ಜಯಿಸಿತ್ತು. 1980ರ ತಂಡ ಕೂಡ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಜಯಿಸಿತ್ತು. 2005ರಲ್ಲಿ ವಿಂಡೀಸ್ ಪ್ರವಾಸವನ್ನು ಭಾರತ ಕೈ ವಶ ಮಾಡಿಕೊಂಡಿತ್ತು, ಅಂತೆಯೇ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಜಯಿಸಿತ್ತು. ಈ ಪೈಕಿ ದ್ರಾವಿಡ್ ಅವರಿಗೆ ಕೊಂಚ ಗೆಲುವಿನ ಶ್ರೇಯ ಸಲ್ಲುತ್ತದೆ ಎಂದು ಗವಾಸ್ಕರ್ ಹೇಳಿದರು.
ಅಂತೆಯೇ ಹಾಲಿ ಟೀಂ ಇಂಡಿಯಾ ಬ್ಯಾಟ್ಸಮನ್ ಗಳ ವಿರುದ್ಧ ಕಿಡಿಕಾರಿಗ ಗವಾಸ್ಕರ್, ಇಂಗ್ಲೆಂಡ್ ನ ಮೊಯಿನ್ ಅಲಿ ಅವರನ್ನು ಭಾರತದ ಆಟಗಾರರು ಸಮರ್ಥವಾಗಿ ಎದುರಿಸಿಲ್ಲ. ಇದಕ್ಕೆ ಟೀಂ ಇಂಡಿಯಾ ಆಟಗಾರರ ಕಳಪೆ ಫುಟ್ ವರ್ಕ್ ಕಾರಣ. ಇದನ್ನೇ ಬಂಡವಾಳ ಮಾಡಿಕೊಂಡ ಮೊಯಿನ್ ಸೂಕ್ತ ಸ್ಥಳದಲ್ಲಿ ಚೆಂಡನ್ನು ಪಿಚ್ ಮಾಡಿ ವಿಕೆಟ್ ಪಡೆಯುತ್ತಿದ್ದರು. ನಾನು ಒಂದು ಹೇಳುತ್ತೇನೆ.. ಈಗಲೂ ಭಾರತ ತಂಡ ಉತ್ತಮವಾಗಿದೆ. ಆದರೆ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕು. ಅವರ ಫುಟ್ವರ್ಕ್ ಸರಿ ಪಡಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಯುವ ಆಟಗಾರ ಪೃಥ್ವಿ ಶಾನನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics