ಕ್ರಿಕೆಟ್

ಐದನೇ ಟೆಸ್ಟ್: ವಿದಾಯದ ಪಂದ್ಯದಲ್ಲಿ ಕುಕ್ ಶತಕ, ಉತ್ತಮ ಮೊತ್ತದತ್ತ ಇಂಗ್ಲೆಂಡ್ ದಾಪುಗಾಲು

Raghavendra Adiga
ಲಂಡನ್: ಆಲಿಸ್ಟರ್‌ ಕುಕ್‌ ಅಂತಿಮ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೇ ಟೆಸ್ಟ್ ನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ನೆರವಾಗಿದ್ದಾರೆ.
ಓವಲ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಉತ್ತಮ ಮೊತ್ತ ಕಲೆಹಾಕಿದೆ.40 ರನ್ ಮುನ್ನಡೆ ಪಡೆದಿರುವ ಅತಿಥೇಯ ತಂಡ ಭೋಜನ ವಿರಾಮದ ವೇಳೆಗೆ 243 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ತಂಡ ಒಟ್ಟಾರೆ 283 ರನ್ ಮುನ್ನಡೆ ಸಾಧಿಸಿದೆ.
ಕುಕ್ ತಮ್ಮ ಅಂತಿಮ ಪಂದ್ಯದಲ್ಲಿ ಶತಕ (103*) ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರು ತಮ್ಮ ಕ್ರಿಕೆಟ್ ಜೀವನದ ಪ್ರಾರಂಭದ ಪಂದ್ಯದಲ್ಲಿಯೂ, ಕಡೆಯ ಪಂದ್ಯದಲ್ಲಿಯೂ ಶತಕ ಸಿಡಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ಕುಕ್ 2006ರಲ್ಲಿ ನಾಗ್ಪುರದಲ್ಲಿ ಭಾರತ ವಿರುದ್ಧ ಟೆಸ್ಟ್ ನ ಮೂಲಕ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಇದೇ ಪಂದ್ಯದಲ್ಲಿ ಅವರು ಶತಕ ಗಳಿಸಿ ಗಮನ ಸೆಳೆದಿದ್ದರೆನ್ನುವುದು ಗಮನಾರ್ಹ.
ವೃತ್ತಿ ಬದುಕಿನ 33ನೇ ಶತಕ ಬಾರಿಸಿರುವ ಕುಕ್ ಅವರಿಗೆ ಪ್ರಸ್ತುತ ಇಂಗ್ಲೆಂಡ್ ನಾಯಕ ಜೋ ರೂಟ್‌ ಸಾಥ್ ನೀಡಿದ್ದು ರೂಟ್ 92  ರನ್ ಗಳಿಸಿಕೊಂಡಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 3-1 ಮುನ್ನಡೆ ಸಾಧಿಸಿದೆ. ಆದರೆ ವಿಜಯದ ಅಂತರ ತಗ್ಗಿಸಲು ಭಾರತ ಈ ಪಂದ್ಯವನ್ನು ಗೆಲ್ಲುವ ಪ್ರಯತ್ನದಲ್ಲಿದೆ.
SCROLL FOR NEXT