ಕ್ರಿಕೆಟ್

ಮೊಯೀನ್ ಆಲಿಗೆ 'ಒಸಾಮ' ಎಂದ ಆಟಗಾರ: ಸ್ಪಷ್ಟನೆ ಕೇಳಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದು

Srinivas Rao BV
ಸಿಡ್ನಿ: ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಇಂಗ್ಲೆಂಡ್ ನ ಆಲ್ ರೌಂಡರ್ ಮೊಯೀನ್ ಅಲಿ ಅವರ ಆತ್ಮಕಥನ ಈಗ ಭಾರಿ ಸುದ್ದಿಯಲ್ಲಿದೆ. 
ಆಸ್ಟ್ರೇಲಿಯಾ ತಂಡದ ಆಟಗಾರನೊಬ್ಬ 2015 ರಲ್ಲಿ ತಮ್ಮನ್ನು ಒಸಾಮ ಎಂದಿದ್ದನ್ನು ಮೊಯೀನ್ ಅಲಿ ತಮ್ಮ ಆತ್ಮಕಥನದಲ್ಲಿ ದಾಖಲಿಸಿದ್ದಾರೆ.  ಈ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ  ಕ್ರಿಕೆಟ್ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡದಿಂದ ಸ್ಪಷ್ಟನೆ ಕೇಳಲು ಮುಂದಾಗಿದೆ. 
ಮೈದಾನದಲ್ಲಿ ಆಸ್ಟ್ರೇಲಿಯಾ ಆಟಗಾರರೊಬ್ಬರು ನನ್ನತ್ತ ತಿರುಗಿ ಟೇಕ್ ದಟ್, ಒಸಾಮ... ಎಂದಿದ್ದರು. ನಾನು ಏನು ಕೇಳಿದೆನೋ ಅದನ್ನು ನಂಬುವುದಕ್ಕೆ ಸಾಧ್ಯವಾಗಲಿಲ್ಲ, ಆಸ್ಟ್ರೇಲಿಯಾ ಆಟಗಾರನ ಮಾತಿನಿಂದ ಸಿಟ್ಟು ಬಂದಿತ್ತು. ಅಂದಿನ ದಿನ ಸಿಟ್ಟು ಮಾಡಿಕೊಂಡಷ್ಟು ಯಾವತ್ತೂ ನಾನು ಮೈದಾನದಲ್ಲಿ ಸಿಟ್ಟು ಮಾಡಿಕೊಂಡಿರಲಿಲ್ಲ ಎಂದು ಮೋಯೀನ್ ಅಲಿ ಹೇಳಿದ್ದಾರೆ. 
ಆಸ್ಟ್ರೇಲಿಯಾ ಆಟಗಾರ ಒಸಾಮ ಎಂದಿದ್ದನ್ನು ಕೆಲವು ಮಂದಿ ಆಟಗಾರರಿಗೂ ತಿಳಿಸಿದೆ, ಅಷ್ಟೇ ಅಲ್ಲದೇ ಇಂಗ್ಲೆಂಡ್ ನ ಕೋಚ್  ಟ್ರೆವರ್ ಬೇಲಿಸ್ ಅವರ ಗಮನಕ್ಕೂ ತಂದೆ, ನಂತರ ಈ ವಿಷಯವನ್ನು ನಮ್ಮ ತಂಡದ ಕೋಚ್ ಆಸ್ಟ್ರೇಲಿಯಾ ಕೋಚ್ ಗಮನಕ್ಕೂ ತಂದಿದ್ದರು. ಮೋಯೀನ್ ಗೆ ಒಸಾಮ ಎಂದು ಹೇಳಿದೆಯಾ? ಎಂದು ಕೇಳಿದ್ದಕ್ಕೆ ಆತ ಸ್ಪಷ್ಟವಾಗಿ ನಿರಾಕರಿಸಿದ್ದ ಎಂದು ಮೋಯೀನ್ ತಮ್ಮ ಆತ್ಮಕಥನದಲ್ಲಿ ಬರೆದಿದ್ದಾರೆ. ಈಗ ಆತ್ಮಕಥನದಲ್ಲಿ ಈ ಅಂಶ ಪ್ರಸ್ತಾಪವಾಗಿರುವುದರಿಂದ ಕ್ರಿಕೆಟ್ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡದಿಂದ ಸ್ಪಷ್ಟನೆ ಕೇಳಲು ಮುಂದಾಗಿದೆ. 
SCROLL FOR NEXT