ಏಷ್ಯಾ ಕಪ್ 2018: ಕ್ರಿಕೆಟ್ ಕೂಸು ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನಕ್ಕೆ 8 ವಿಕೆಟ್ ಜಯ 
ಕ್ರಿಕೆಟ್

ಏಷ್ಯಾ ಕಪ್ 2018: ಕ್ರಿಕೆಟ್ ಕೂಸು ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನಕ್ಕೆ 8 ವಿಕೆಟ್ ಜಯ

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸಾಗುತ್ತಿರುವ ಏಷ್ಯಾ ಕಪ್ 2018 ಸರಣಿಯಲ್ಲಿ ಭಾನುವಾರದಂದು ಪಾಕಿಸ್ತಾನ ದುರ್ಬಲ ಹಾಂಗ್ ಕಾಂಗ್ ವಿರುದ್ಧ 8 ವಿಕೆಟ್....

ದುಬೈ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸಾಗುತ್ತಿರುವ ಏಷ್ಯಾ ಕಪ್ 2018 ಸರಣಿಯಲ್ಲಿ ಭಾನುವಾರದಂದು ಪಾಕಿಸ್ತಾನ  ದುರ್ಬಲ ಹಾಂಗ್ ಕಾಂಗ್ ವಿರುದ್ಧ 8 ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ  ಹಾಂಗ್ ಕಾಂಗ್  37.1 ಓವರ್ ಗಳಲ್ಲಿ ಕೇವಲ 116 ರನ್ ಗಳಿಸುವಷ್ಟರಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಪಾಕ್ ಇಮಾಮ್ ಉಲ್ ಹಕ್ ಅಜೇಯ ಅರ್ಧಶತಕದ  (50*) ನೆರವಿನೊಡನೆ  23.4 ಓವರ್‌ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಗೆಲುವು ಸಾಧಿಸಿದೆ.ಇಮಾಮ್ 69 ಎಸೆತಗಳಲ್ಲಿ ಅಜೇಯ 50 ರನ್ ಕಲೆಹಾಕಿದ್ದರು.
ಪಾಕ್ ಪರವಾಗಿ ಫಖಾರ್ ಜಮಾನ್ (24), ಬಾಬರ್ ಅಜಾಮ್ (33) ಹಾಗೂ ಶೋಯಿಬ್ ಮಲಿಕ್ (9*)  ರನ್ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಹಾಂಗ್ ಕಾಂಗ್: 116 (37.1)
ಪಾಕಿಸ್ತಾನ: 120/2 (23.4)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT