ನವದೆಹಲಿ: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರ ಸಹೋದರ ಮೆಬಬೂಬ್ ಹಸನ್ ಹೇಳಿದ್ದಾರೆ.
ಅವರೆ ಅವರ ಸಹೋದರ ಪಾಕಿಸ್ತಾನ ಕ್ರಿಕೆಟ್ ತಂಡ ನಾಯಕನಾಗಿದ್ದರೂ ಅವರೇಕೆ ಭಾರತವನ್ನು ಬೆಂಬಲಿಸುತ್ತಿದ್ದಾರೆ ಎಂದು ಅಚ್ಚರಿ ಪಡಬೇಡಿ.. ಸರ್ಫರಾಜ್ ಸಹೋದರ ಪ್ರಸ್ತುತ ಭಾರತದಲ್ಲಿದ್ದು, ಉತ್ತರ ಪ್ರದೇದ ಇಟಾವಾದಲ್ಲಿ ಕೃಷಿ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಂದಿನ ಹೈವೋಲ್ಟೇಜ್ ಪಂದ್ಯದ ಕುರಿತು ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ ಮೆಹಬೂಬ್ ಹಸನ್ ಅವರು, ಇಂದಿನ ಪಂದ್ಯವನ್ನಷ್ಟೇ ಅಲ್ಲ.. ಈ ಬಾರಿ ಏಷ್ಯಾಕಪ್ ಕೂಡ ಭಾರತದ ಪಾಲಾಗಲಿದೆ ಎಂದು ಹೇಳಿದ್ದಾರೆ. ಅಂತೆಯೇ ಇಂದಿನ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮೆಹಬೂಬ್ ಹಸನ್ ಹೇಳಿದ್ದಾರೆ.
ಈ ಹಿಂದೆ ಹೈವೋಲ್ಟೇಜ್ ಕದನದ ಕುರಿತು ಮಾತನಾಡಿದ್ದ ಪಾಕ್ ತಂಡದ ನಾಯಕ ಹಾಂಕಾಂಗ್ ವಿರುದ್ಧದ ಭರ್ಜರಿ ಗೆಲುವು ತಂಡದ ಆತ್ಮ ಸ್ಥೈರ್ಯ ಹೆಚ್ಚಾಗುವಂತೆ ಮಾಡಿದೆ. ನಿಜಕ್ಕೂ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದಾದ ಭಾರತದ ವಿರುದ್ಧ ಸೆಣಸಲು ಖುಷಿಯಾಗುತ್ತದೆ. ಅಂತೆಯೇ ಆ ಪಂದ್ಯದಲ್ಲೂ ನಾವು ಗೆಲುವು ಸಾಧಿಸಲಿದ್ದೇವೆ. ಅಷ್ಟು ಮಾತ್ರವಲ್ಲದೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆಲ್ಲಲ್ಲಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics