ಪತಿ ಯಾರೆಂದು ಗುರುತಿಸಿ: ವೈರಲ್ ಆಯ್ತು ವಿರೇಂದ್ರ ಸೆಹ್ವಾಗ್ ಅಪ್ಲೋಡ್ ಮಾಡಿದ್ದ ಫೋಟೋ!
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಪ್ಲೋಟ್ ಮಾಡಿದ್ದ ಮಿಂಚುಳ್ಳಿ ಜೋಡಿ ಹಕ್ಕಿಗಳ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಫೋಟೋ ಕುರಿತಂತೆ ಸೆಹ್ವಾಗ್ ಮಾಡಿರುವ ಹಾಸ್ಯ ಕೂಡ ವೈರಲ್ ಆಗ ತೊಡಗಿದೆ.
ನವದೆಹಲಿ: ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಪ್ಲೋಟ್ ಮಾಡಿದ್ದ ಮಿಂಚುಳ್ಳಿ ಜೋಡಿ ಹಕ್ಕಿಗಳ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಫೋಟೋ ಕುರಿತಂತೆ ಸೆಹ್ವಾಗ್ ಮಾಡಿರುವ ಹಾಸ್ಯ ಕೂಡ ವೈರಲ್ ಆಗ ತೊಡಗಿದೆ.
ವ್ಯಂಗ್ಯ ಮಾಡುವುದರಲ್ಲಿ ಮತ್ತೊಬ್ಬರ ಕಾಲೆಳೆಯುವುದರಲ್ಲಿ ಸೆಹ್ವಾಗ್ ಎತ್ತಿದ. ಅದೇ ರೀತಿ ಮಿಂಚುಳ್ಳಿ ಜೋಡಿ ಹಕ್ಕಿಗಳ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಸೆಹ್ವಾಗ್ ಅದಕ್ಕೆ ನೀಡಿರುವ ಶೀರ್ಷಿಕೆ ಕೂಡ ಅವರ ಅಭಿಮಾನಿಗಳ ನಕ್ಕು ನಗಿಸಿದೆ.
ಫೋಟೋದಲ್ಲಿ ಮಿಂಚುಳ್ಳಿ ಜೋಡಿ ಹಕ್ಕಿಗಳು ಕುಳಿತಿದ್ದು, ಈ ಪೈಕಿ ಒಂದು ಹಕ್ಕಿ ಕಿರುಚಾಡುತ್ತಿದೆ. ಮತ್ತೊಂದು ಶಾಂತವಾಗಿದ್ದು, ಇದಕ್ಕೆ ಶೀರ್ಷಿಕೆ ನೀಡಿರುವ ಸೆಹ್ವಾಗ್ ಇದರಲ್ಲಿ ಪತಿ ಯಾರೆಂದು ತಿಳಿಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ‘ಚಿತ್ರದಲ್ಲಿರುವ ಪಕ್ಷಿಗಳ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ, ಆದರೆ ಇದರಲ್ಲಿ ಪತಿ ಯಾರೆಂಬುದನ್ನು ಸುಲಭವಾಗಿ ಗುರುತಿಸಬಹುದು’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಫೊಟೊಗೆ ಬರೊಬ್ಬರಿ 31 ಸಾವಿರ ಲೈಕ್, ರಿಟ್ವೀಟ್ ಬಂದಿದ್ದು, ಫೋಟೋ ವೈರಲ್ ಆಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.