ವಿಜಯ್ ಹಜಾರೆ ಟ್ರೋಫಿ: 2 ದಶಕಗಳ ಹಿಂದಿನ ವಿಶ್ವದಾಖಲೆ ಸರಿಗಟ್ಟಿದ ಸ್ಪಿನ್ನರ್ ಶಹಬಾಜ್ ನದೀಮ್ 
ಕ್ರಿಕೆಟ್

ವಿಜಯ್ ಹಜಾರೆ ಟ್ರೋಫಿ: 2 ದಶಕಗಳ ಹಿಂದಿನ ವಿಶ್ವದಾಖಲೆ ಸರಿಗಟ್ಟಿದ ಸ್ಪಿನ್ನರ್ ಶಹಬಾಜ್ ನದೀಮ್

ವಿಜಯ್ ಹಜಾರೆ ಟ್ರೋಫಿಯ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಜಾರ್ಖಂಡ್ ಸ್ಪಿನ್ನರ್ ಶಹಬಾಜ್ ನದೀಮ್, ಲಿಸ್ಟ್ ಎ ಕ್ರಿಕೆಟ್ ನಲ್ಲಿ 2 ದಶಕಗಳ ಹಿಂದಿನ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಜಾರ್ಖಂಡ್ ಸ್ಪಿನ್ನರ್ ಶಹಬಾಜ್ ನದೀಮ್, ಲಿಸ್ಟ್ ಎ ಕ್ರಿಕೆಟ್ ನಲ್ಲಿ 2 ದಶಕಗಳ ಹಿಂದಿನ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. 
8/10 ವಿಕೆಟ್ ಗಳನ್ನು ಪಡೆಯುವ ಮೂಲಕ   ನದೀಮ್ ಜಾರ್ಖಂಡ್ ತಂಡ 7 ವಿಕೆಟ್ ಗಳ ಅಂತರದಿಂದ ಜಯಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.  28.3 ಓವರ್ ಗಳಲ್ಲಿ ರಾಜಸ್ಥಾನ ತಂಡವನ್ನು 73 ರನ್ ಗಳಿಗೆ ಔಟ್ ಮಾಡಿದ್ದ ಜಾರ್ಖಂಡ್ ತಂಡದಲ್ಲಿ ನದೀಪ್ ಬೆಸ್ಟ್ ಬೌಲರ್ ಎನಿಸಿದ್ದಾರೆ. 
ಈ ಹಿಂದಿನ ದಾಖಲೆಯೂ ಸಹ ಭಾರತೀಯ ಕ್ರಿಕೆಟಿಗನದ್ದೇ ಆಗಿದ್ದು, 1997-98 ರ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿಯ ಎಡಗೈ ಸ್ಪಿನ್ನರ್ ರಾಹುಲ್ ಸಂಘ್ವಿ 8/15 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು ನಂತರ 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡಿದ್ದರು.
ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆಯನ್ನೂ ನದೀಮ್ ಮಾಡಿದ್ದಾರೆ. ನನ್ನ ಪ್ರದರ್ಶನ ಹಾಗೂ ಹ್ಯಾಟ್ರಿಕ್ ಸಾಧನೆಯ ಬಗ್ಗೆ ಸಂತಸವಿದೆ ಎಂದು ಶಹಬಾಜ್ ನದೀಮ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT