ಪಾಕ್ ಬೆಡಗಿ-ಶಿಖರ್ ಧವನ್ 
ಕ್ರಿಕೆಟ್

ಭಾರತ ವಿರುದ್ಧ ಪಾಕ್ ಸೋತರು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದ ಪಾಕ್ ಬೆಡಗಿ!

ಟಿ20 ವಿಶ್ವಕಪ್ ಸೋಲಿನ ಪ್ರತಿಕಾರವಾಗಿ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಇದೇ ಪಂದ್ಯದಲ್ಲಿ ಪಾಕ್ ಸೋಲಿನ...

ದುಬೈ: ಟಿ20 ವಿಶ್ವಕಪ್ ಸೋಲಿನ ಪ್ರತಿಕಾರವಾಗಿ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಇದೇ ಪಂದ್ಯದಲ್ಲಿ ಪಾಕ್ ಸೋಲಿನ ನಡುವೆ ಪಾಕ್ ಬೆಡಗಿಯೊಬ್ಬಳು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾಳೆ. 
ಪಾಕ್ ಮತ್ತು ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕ್ ಸೋಲು ಖಚಿತವಾಗುತ್ತಿದಂತೆ ಕ್ಯಾಮೆರಾಮನ್ ಪ್ರೇಕ್ಷಕರ ಸಂಭ್ರಮಾಚರಣೆ ಸೆರೆಹಿಡಿಯಲು ಮುಂದಾಗಿದ್ದು ಈ ವೇಳೆ ಯುವತಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾಳೆ. ಇದನ್ನು ಕಂಡ ಹಲವು ಅಭಿಮಾನಿಗಳು ಮತ್ತೆ ಯುವತಿಯನ್ನು ಕಾಣಲು ಇಂಡೋ ಪಾಕ್ ನಡುವೆ ಮತ್ತಷ್ಟು ಪಂದ್ಯಗಳನ್ನು ಆಯೋಚಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. 
ಪಾಕ್ ಯುವತಿಯ ಫೋಟೋಗಳನ್ನು ಟ್ವೀಟರ್ ನಲ್ಲಿ ಪೋಸ್ಟ್  ಮಾಡಿ ಅಭಿಮಾನಿಗಳು ಭರ್ಜರಿ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಕೆಲವರು ಪಂದ್ಯದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎಂದು ಶೀರ್ಷಿಕೆ ನೀಡಿ ಫೋಟೋ ಶೇರ್ ಮಾಡಿದ್ದಾರೆ. 
ಟೀಂ ಇಂಡಿಯಾ ವಿರುದ್ಧ ಪಾಕ್ ಸೋಲು ಖಚಿತವಾಗಿದ್ದರೂ ತಂಡದ ಜರ್ಸಿ ತೊಟ್ಟಿದ್ದ ಯುವತಿ ಮಾತ್ರ ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಳು. ಕೆಲವೇ ಸೆಕೆಂಡ್ ಗಳು ಮಾತ್ರ ಯುವತಿ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಶ್ಲಾಘಿಸಿದ ಪಿಯೂಷ್ ಗೋಯಲ್; ಭಾರತದ ಉಜ್ವಲ ಭವಿಷ್ಯಕ್ಕೆ ಇದು ಶುಭ ಸೂಚನೆ

Indian Stock Market: 2ನೇ ದಿನವೂ ಮಹಾ ಏರಿಕೆ, ಕೇವಲ 15 ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ವೃದ್ಧಿ!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಏರಿಕೆ

ವಿಬಿ-ಜಿ ರಾಮ್ ಜಿ ರದ್ದುಗೊಳಿಸಿ, ‘ಮನರೇಗಾ’ ಮರುಜಾರಿಗೆ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಪ್ರಧಾನಿ ಮೋದಿ ಹೆದರಿದ್ದು, ದೇಶವನ್ನೇ ಮಾರಿದ್ದಾರೆ: ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ರಾಹುಲ್ ಗಾಂಧಿ ಟೀಕೆ

SCROLL FOR NEXT