ಕೊಲೊಂಬೊ :ಜೆಮಿಮಾ ರೊಡ್ರಿಗಸ್ 40 ಎಸೆತಗಳಲ್ಲಿ ಸಿಡಿಸಿದ 57 ಭರ್ಜರಿ ರನ್ ಗಳ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೂರನೇ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಭಾರತೀಯ ಮಹಿಳೆಯರ ತಂಡ ಗೆಲುವು ಸಾಧಿಸಿದೆ.
ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರಗಳಿದ ಮುನ್ನಡೆ ಕಾಯ್ದುಕೊಂಡಿದ್ದು, ಟೀಂ ಇಂಡಿಯಾ ವನಿತೆಯರ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.
ನಿಗದಿತ 20 ಓವರ್ ಗಳಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್ ಗಳ ನಷ್ಟಕ್ಕೆ 131ಕ್ಕೆ ಕಟ್ಟಿಹಾಕುವಲ್ಲಿ ಭಾರತದ ತಂಡ ಯಶಸ್ವಿಯಾಯಿತು. ಶ್ರೀಲಂಕಾ ಪರ ಶಶಿಕಲಾ ಸಿರಿವರ್ದನೆ (35 ) ನಿಲಾಕ್ಷಿ ಸಿಲ್ವಾ (31) ರನ್ ಗಳಿಸಿದರು. ಈ ಸುಲಭ ಗುರಿಯನ್ನು ಬೆನ್ನತ್ತಿದ್ದ ಭಾರತದ ಮಹಿಳೆಯರ ತಂಡ 18.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸುವ ಮೂಲಕ ಜಯಭೇರಿ ಬಾರಿಸಿತು.
ಭಾರತದ ಪರ ಮಧ್ಯಮ ವೇಗಿ ಅರುಂಧತಿ ರೆಡ್ಡಿ ನಾಲ್ಕು ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 19 ರನ್ ಗಳಿಸಿದರು. ನಾಯಕಿ ಹಮ್ರನ್ ಪ್ರೀತ್ ಕೌರ್ ಕೆಲ ವಿಕೆಟ್ ಗಳನ್ನು ಕಬಳಿಸಿದರು.
ಇನ್ನೂ ಬ್ಯಾಟಿಂಗ್ ನಲ್ಲಿ ಮಿಂಚಿದ ಭಾರತದ ಜೆಮಿಮಾ ರೊಡ್ರಿಗಸ್ ಆರು ಬೌಂಡರಿ ಹಾಗೂ ಎರಡು ದೊಡ್ಡ ಎಸೆತೆಗಳ ಮೂಲಕ 57 ರನ್ ಗಳಿಸಿದರು. ಹರ್ಮನ್ ಪ್ರೀತ್ ಕೌರ್ 19 ಎಸೆತಗಳಲ್ಲಿ 24 ರನ್ ಗಳಿಸಿದರು.