ಕ್ರಿಕೆಟ್

ಕ್ರಿಕೆಟ್ ವಿಷಯಗಳಲ್ಲಿ ರಾಜಕಾರಣಿಗಳ ಮಧ್ಯಪ್ರವೇಶ ಬೇಡ: ಪಿಸಿಬಿ ಮುಖ್ಯಸ್ಥ

ಭಾರತ- ಪಾಕಿಸ್ತಾನ ನಡುವಿನ ಪಂದ್ಯಗಳನ್ನು ರಾಜಕಾರಣದ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಕ್ರಿಕೆಟ್ ವಿಷಯಗಳಲ್ಲಿ ರಾಜಕಾರಣಿಗಳು ಮಧ್ಯ ಪ್ರವೇಶಿಸಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಹೇಳಿದ್ದಾರೆ.

ದುಬೈ :ಭಾರತ- ಪಾಕಿಸ್ತಾನ ನಡುವಿನ ಪಂದ್ಯಗಳನ್ನು  ರಾಜಕಾರಣದ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಕ್ರಿಕೆಟ್  ವಿಷಯಗಳಲ್ಲಿ ರಾಜಕಾರಣಿಗಳು ಮಧ್ಯ ಪ್ರವೇಶಿಸಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಹೇಳಿದ್ದಾರೆ.

ಅಲ್ಲದೇ,  ಭಾರತ- ಪಾಕಿಸ್ತಾನ  ಕ್ರಿಕೆಟ್ ಮಂಡಳಿ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಮಾತುಕತೆಗಳು ಮುಂದುವರೆಯಲಿವೆ ಎಂದು ಮಣಿ ತಿಳಿಸಿದ್ದು, ಕ್ರಿಕೆಟ್  ನಲ್ಲಿ ರಾಜಕಾರಣ ಹಾಗೂ ರಾಜಕಾರಣಿಗಳು ಮಧ್ಯಪ್ರವೇಶಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕ್ರಿಕೆಟ್ ಪಂದ್ಯಗಳು ಯಾವುದೇ ವ್ಯಕ್ತಿ ಅಥವಾ ರಾಜಕಾರಣಿಗಳಿಗಿಂತಲೂ ಮಹತ್ವದಾಗಿದ್ದು,  ಉಭಯ ದೇಶಗಳ ನಡುವಿನ ಕ್ರಿಕೆಟ್ ಮಂಡಳಿಗಳ ಸಂಬಂಧಗಳು ಪ್ರಗತಿಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಆಡುವಾಗ ಸುಮಾರು 100 ಬಿಲಿಯನ್ ಕ್ರಿಕೆಟ್ ಪ್ರೇಮಿಗಳು ವಿಶ್ವದಾದ್ಯಂತ ವೀಕ್ಷಿಸುತ್ತಾರೆ. ಆದರೆ. ಆ  ಹಂತದಲ್ಲಿ ರಾಜಕಾರಣದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ,ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಜೊತೆಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ದಿನಗಳಲ್ಲಿ ಏನೆಲ್ಲಾ ಸಂಭವಿಸಿದೆ ಎಂಬುದನ್ನ ನಾವೆಲ್ಲರೂ ಅರ್ಥ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳ ಬಗ್ಗೆ ಎದುರು ನೋಡುತ್ತಿರುವುದಾಗಿ ಎಹಸಾನ್ ಮಣಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?