ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಸೂಪರ್ ಫೋರ್ ಹಂತದ ಮಂಗಳವಾರದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಅವರು 200ನೇ ಬಾರಿ ಟೀಂ ಇಂಡಿಯಾ ನಾಯಕರಾದಂತಾಗಿದೆ.
ಆರಂಭಿಕ ಆಟಗಾರರಾದ ಶಿಖರ್ ಧವನ್, ರೋಹಿತ್ ಶರ್ಮಾ, ಬುಮ್ರಾ, ಭುವನೇಶ್ವರ್ ಹಾಗೂ ಚಹಾಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಇವರುಗಳ ಬದಲಿಗೆ ಕೆ.ಎಲ್. ರಾಹುಲ್, ಮನೀಶ್ ಪಾಂಡೆ, ಖಲೀಲ್ ಅಹ್ಮದ್, ದೀಪಕ್ ಚಹಾರ್ ಮತ್ತು ಸಿದ್ಧಾರ್ಥ್ ಕೌಲ್ ಕಣದಲ್ಲಿದ್ದಾರೆ.
ಇನ್ನು ಅಫ್ಘಾನ್ ತಂಡದ ಸಾಮಿವುಲ್ಲಾ ಹಾಗೂ ಇನ್ಸಾನುಲ್ಲಾ ಅವರೌಗಳಿಗೆ ವಿಶ್ರಾಂತಿ ನೀಡಲಾಗಿದ್ದು ಅವರ ಬದಲಿಗೆ ನಿಜಾಬ್ ಉಲ್ಲಾ ಜಾವೇದ್ ಅಹಮದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇತ್ತೀಚಿನ ವರದಿ ಬಂದಾಗ ಅಫ್ಘಾನ್ ತಂಡ 14.2 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ.