ಪಂಜಾಬ್ ವಿರುದ್ಧ ಚೆನ್ನೈಗೆ ಗೆಲುವು
ಚೆನ್ನೈ: ಹಾಲಿ ಐಪಿಎಲ್ 2019 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ನಾಗಾಲೋಟ ಮತ್ತೆ ಮುಂದುವರೆದಿದ್ದು, ಇಂದು ತವರಿನ ಮೈದಾನದಲ್ಲಿ ಪಂಜಾಬ್ ವಿರುದ್ಧ 22 ರನ್ ಗಳ ಭರ್ಜರಿ ಜಯ ಗಳಿಸಿದೆ.
ಚೆನ್ನೈ ನೀಡಿದ 161 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 138 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಚೆನ್ನೈ ವಿರುದ್ಧ 22 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡಕ್ಕೆ ಕೆಎಲ್ ರಾಹುಲ್ (55 ರನ್) ಮತ್ತು ಸರ್ಫರಾಜ್ ಖಾನ್ (67 ರನ್) ಅವರನ್ನು ಹೊರತು ಪಡಿಸಿದರೆ ಉಳಿದ ಯಾವ ಆಟಗಾರನೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಡುವ ಪ್ರಯತ್ನ ಮಾಡದೇ ಒಂದಂಕಿ ಮೊತ್ತಕ್ಕೇ ಪೆವಿಲಿಯನ್ ಸೇರಿಕೊಂಡರು. ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ 5 ರನ್ ಗಳಿಸಿದರೆ, ಮಯಾಂಕ್ ಅಗರ್ವಾಲ್ ಶೂನ್ಯ ಸುತ್ತಿದರು. ಡೇವಿಡ್ ಮಿಲ್ಲರ್ ಅಜೇಯ 6 ರನ್ ಗಳಿಸಿದರು.
ಚೆನ್ನೈ ಪರ ಹರ್ಭಜನ್ ಸಿಂಗ್ ಹಾಗೂ ಸ್ಕಾಟ್ ಕುಗ್ಲೀಲೀಜನ್ ತಲಾ 2 ವಿಕೆಟ್ ಕಬಳಿಸಿದರೆ, ದೀಪಕ್ ಚಾಹರ್ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದ ಚೆನ್ನೈ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಫಾಫ್ ಡುಪ್ಲೆಸಿಸ್ ಅವರ ಆಕರ್ಷಕ ಅರ್ಧಶತಕ (54 ರನ್) ಹಾಗೂ ನಾಯಕ ಎಂಎಸ್ ಧೋನಿ (ಅಜೇಯ 37 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ ಚೆನ್ನೈ ತಂಡ 160ರನ್ ಗಳ ಸವಾಲಿನ ಗುರಿ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics