ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡ ಸತತ 5 ಪಂದ್ಯ ಸೋತು ತೀವ್ರ ನಿರಾಸೆ ಮೂಡಿಸಿದ್ದರು. ತಂಡ ನಾಯಕ ವಿರಾಟ್ ಕೊಹ್ಲಿ ಮಾತ್ರ ದಾಖಲೆಯೊಂದನ್ನು ಬರೆದಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 8000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಟೀಂ ಇಂಡಿಯಾದ 2ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 17 ರನ್ ಸಿಡಿಸುವುದರೊಂದಿಗೆ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ 8000 ರನ್ ಪೂರೈಸಿದರು. ಇನ್ನು 35 ರನ್ ಸಿಡಿಸಿದಾಗ ಭಾರತದಲ್ಲಿ 6000 ರನ್ ಪೂರೈಸಿದ ಸಾಧನೆ ಮಾಡಿದರು.
ವಿರಾಟ್ ಕೊಹ್ಲಿಗೂ ಮೊದಲು ಸುರೇಶ್ ರೈನಾ 8000 ರನ್ ಪೂರೈಸಿದ್ದಾರೆ. ಚುಟುಕು ಕ್ರಿಕೆಟ್ ನಲ್ಲಿ 8000 ರನ್ ಪೂರೈಸಿದ ವಿಶ್ವದ 7ನೇ ಕ್ರಿಕೆಟಿಗ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 8 ಸಾವಿರ ರನ್ ಪೂರೈಸಲು ಕೊಹ್ಲಿ 256 ಪಂದ್ಯಗಳನ್ನು ತೆಗೆದುಕೊಂಡಿದ್ದರೆ. ಸುರೇಶ್ ರೈನಾ 300 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics