ಧೋನಿಗೆ ಪಂದ್ಯದ ಸಂಬಾವನೆಯ ಶೇ.50 ದಂಡ
ಜೈಪುರ: ಐಪಿಎಲ್ ಪಂದ್ಯಾವಳಿಯ ವೇಳೆ ಶಿಸ್ತು ಉಲ್ಲಂಘಿಸಿ ಮೈದಾನ ಪ್ರವೇಶಿಸಿದ್ದಕ್ಕಾಗಿ ಟೀಂ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನೇತೃತ್ವ ವಹಿಸಿರುವ ಎಂ.ಎಸ್. ಧೋನಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 50ನ್ನು ದಂಡ ವಿಧಿಸಲಾಗಿದೆ.
ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಧೋನಿ ತಮ್ಮ ವೃತ್ತಿಜೀವನದಲ್ಲಿ ಅಪೂರ್ವವೆನ್ನುವಂತೆ ಗುರುವಾರದ ಪಂದ್ಯದ ವೇಳೆ ಜಡೇಜಾ ಹಾಗೂ ಆಕ್ಷನ್ ಪೋರ್ಡ್ ನಡುವೆ "ನೋ ಬಾಲ್" ವಿಚಾರದಲ್ಲಿ ಉಂಟಾದ ವಾಗ್ವಾದದ ನಡುವೆ ಡಗೌಟ್ ನಲ್ಲಿದ್ದ ಧೋನಿ ಪ್ರವೇಶಿಸಿದ್ದರು. ಮಾತುಕತೆ ಬಿಸಿ ಪಡೆದುಕೊಂಡಿತ್ತು. ಹೀಗೆ ನಿಯಮಬಾಹಿರವಾಗಿ ಮೈದಾನಕ್ಕೆ ಬಂದ ಕಾರಣ ಧೋನಿಗೆ ಈಗ ಸಂಕಷ್ಟ ಎದುರಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಅವರು ಐಪಿಎಲ್ನ ರಾಜಸ್ಥಾನ ರಾಯಲ್ಸ್ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶುಲ್ಕದ 50 ಪ್ರತಿಶತ ದಂಡ ವಿಧಿಸಲಾಗಿದೆ ಎಂದು ಬಿಸಿಐಐ ಹೇಳಿದೆ.
ನಿಯಮ ಉಲ್ಲಂಘನೆ ಒಪಿರುವ ಧೋನಿ ಶುಲ್ಕದ ಮೇಲಿನ ದಂಡ ತೆರಲು ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಚೆನ್ನೈಗೆ ಅಂತಿಮ ಓವರ್ ನಲ್ಲಿ ಗೆಲ್ಲಲು 18 ರನ್ ಗಳ ಅಗತ್ಯವಿತ್ತು. ಆ ವೇಳೆ ಜಡ್ಡು ಮೊದಲ ಎಸೆತಕ್ಕೆ ಸಿಕ್ಸರ್ ಸಿಡಿಸಿದ್ದರು. ಆದರೆ ಆದರೆ ಇದೇ ಓವರ್ ನ ಮೂರನೇ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್ ಆಗುವುದರೊಡನೆ ಅಭಿಮಾನಿಗಳಿಗೆ ಆಘಾತ ಮೂಡಿಸಿದ್ದರು. ನಾಲ್ಕನೇ ಎಸೆತ ರಾಜಸ್ಥಾನ ಪರ ಸ್ಟ್ರೋಕ್ಸ್ ಎಸೆದಿದ್ದ ಬಾಲ್ ಬ್ಯಾಟ್ ಗೆ ತಾಕದೆ ಹಿಂದೆ ಸರಿದು ಹೋಗಿತ್ತು. ಆದರೆ ಆ ಭಾಗದಲ್ಲಿ ಯಾವ ಫೀಲ್ಡರ್ ಇಲ್ಲದ ಕಾರಣ ಚೆನ್ನೈನ ಸ್ಯಾಂತನರ್ ಹಾಗೂ ಜಡೇಜಾ ಸೇರಿ ಎರಡು ರನ್ ಗಳಿಸಿದ್ದರು. ಆಗ ಅಂಪೇರ್ ಉಲ್ಲಾಸ್ ಗಂದೆ "ನೋಬಾಲ್" ಸೂಚನೆ ನೀಡಿದ್ದಾರೆ.ಇನ್ನೊಬ್ಬ ಅಂಪೇರ್ ಆಕ್ಸನ್ ಪೋರ್ಡ್ "ನೋಬಾಲ್" ನೀಡಲು ಒಪ್ಪಲಿಲ್ಲ. ಇದೇ ವೇಳೆ ಜಡೇಜಾ ನೋಬಾಲ್ ನಿಡುವಂತೆ ಅಂಪೇರ್ ಗೆ ಮನವಿ ಮಾಡಿದರೂ ಅಂಪೇರ್ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಆಗ ಧೋನಿ ಮೈದಾನಕ್ಕೆ ಆಗಮಿಸಿ ಅಂಪೇರ್ ಜತೆ ಮಾತಿಗಿಳಿದಿದ್ದಾರೆ. ಆದರೂ ಅಂಪೇರ್ ಮಾತ್ರ "ನೋಬಾಲ್" ನೀಡಲು ಒಪ್ಪಲೇ ಇಲ್ಲ.
ಇದಾಗಿ ಐದನೇ ಎಸೆತಕ್ಕೆ ಸ್ಯಾಂತನರ್ ಮತ್ತೆ ಎರಡು ರನ್ ಗಳಿಸಿದ್ದರು. ಕಡೆಯ ಎಸೆತ ವೈಡ್ ಆಗಿ ಸ್ಯಾಂಟನರ್ ಅದ್ಭುತ ಆಟಕ್ಕೆ ಜಯಲಕ್ಷ್ಮಿ ಒಲಿದಿದ್ದಳು.