ಜೈಪುರ: ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಐಪಿಎಲ್ ನಲ್ಲೂ ದಾಖಲೆ ನಿರ್ಮಾಣ ಮಾಡಿದ್ದು, ಐಪಿಎಲ್ ನಲ್ಲಿ ನಾಯಕನಾಗಿ 100 ಪಂದ್ಯಗಳ ಗೆದ್ದ ಏಕೈಕ ಆಟಗಾರ ಕೀರ್ತಿಗೆ ಭಾಜನರಾಗಿದ್ದಾರೆ.
ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್ ನಲ್ಲಿ 100ನೇ ಪಂದ್ಯವನ್ನು ಗೆದ್ದ ನಾಯಕ ಎಂಬ ಕೀರ್ತಿಗೆ ಎಂಎಸ್ ಧೋನಿ ಭಾಜನರಾಗಿದ್ದಾರೆ. ಐಪಿಎಲ್ ನಲ್ಲಿ ಒಟ್ಟು 182 ಪಂದ್ಯಗಳನ್ನು ಆಡಿರುವ ಧೋನಿ 41.47ರ ಸರಾಸರಿಯಲ್ಲಿ 4230 ರನ್ ಪೇರಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳೂ ಕೂಡ ಸೇರಿವೆ.
ಬೌಲಿಂಗ್ ನಲ್ಲಿ ಜಡ್ಡು ದಾಖಲೆ
ಇದೇ ಸಂದರ್ಭದಲ್ಲಿ ರಾಜಸ್ತಾನ ತಂಡದ ವಿರುದ್ಧ ಸಿಎಸ್ ಕೆ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಅಪರೂಪದ ದಾಖಲೆಯೊಂದನ್ನು ಬರೆದಿದ್ದು, ಇಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಸ್ಚೀವ್ ಸ್ಮಿತ್ ಹಾಗೂ ರಾಹುಲ್ ತ್ರಿಪಾಠಿ ವಿಕೆಟ್ ಕಬಳಿಸುವ ಮೂಲಕ ತಮ್ಮ ವಿಕೆಟ್ ಗಳ ಸಂಖ್ಯೆಯನ್ನು 100ಕ್ಕೆ ಏರಿಸಿಕೊಂಡರು. ಆ ಮೂಲಕ ಐಪಿಎಲ್ ನಲ್ಲಿ ಜಡ್ಡು 100 ವಿಕೆಟ್ ಗಳಿಸಿದ ಸಾಧನೆ ಮಾಡಿದರು.
ದಾಖಲೆ ಮಿಸ್ ಮಾಡಿಕೊಂಡ ವಾಟ್ಸನ್
ಇನ್ನು ಅತ್ತ ಸಿಎಸ್ ಕೆ ಇಬ್ಬರು ಆಟಗಾರರು ಅಪರೂಪದ ದಾಖಲೆಗಳನ್ನು ನಿರ್ಮಾಣ ಮಾಡಿದರೆ ಅದೇ ತಂಡದ ಮತ್ತೋರ್ವ ಆಟಗಾರ ಶೇನ್ ವಾಟ್ಸನ್ ದಾಖಲೆ ತಪ್ಪಿಸಿಕೊಂಡರು. ಹೌದು ಈ ಪಂದ್ಯದಲ್ಲಿ ಶೇನ್ ವಾಟ್ಸನ್ ಕೇವಲ 31 ರನ್ ಪೇರಿಸಿದರೆ ಅವರ ಐಪಿಎಲ್ ರನ್ ಗಳಿಕೆ 1000ರನ್ ಗೆ ಏರಿಕೆಯಾಗುತ್ತಿತ್ತು. ಆದರೆ ಇಂದು ವಾಟ್ಸನ್ ಶೂನ್ಯಕ್ಕೆ ಔಟ್ ಆಗಿ ದಾಖಲೆ ಮಿಸ್ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics