ಕ್ರಿಕೆಟ್

ಐಸಿಸಿ ವಿಶ್ವಕಪ್ 2019 ಆಸಿಸ್ ತಂಡ: ನಿಷೇಧಕ್ಕೊಳಗಾಗಿದ್ದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಗೆ ಸ್ಥಾನ!

Srinivasamurthy VN
ಸಿಡ್ನಿ: ಮುಂಬರುವ ಐಸಿಸಿ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಅಚ್ಚರಿ ಬೆಳವಣಿಗೆ ಎಂಬಂತೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೊಳಗಾಗಿದ್ದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಹೌದು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೇಪ್ ಟೌನ್ ಟೆಸ್ಟ್ ಪಂದ್ಯದ ವೇಳೆ ನಡೆದಿದ್ದ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಾಜಿ ಸ್ಟೀವ್ ಸ್ಮಿತ್ ಹಾಗೂ ಉಪ ನಾಯಕಕ ಡೇವಿಡ್ ವಾರ್ನರ್ ರನ್ನು ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಮತ್ತೆ ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.
ಆದರೆ ಈ ತಂಡಕ್ಕೆ ಆ್ಯರೋನ್ ಫಿಂಚ್ ನಾಯಕರಾಗಿದ್ದು, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಉಸ್ಮಾನ್ ಖವಾಜ, ಗ್ಲೇನ್ ಮ್ಯಾಕ್ಸ್ ವೆಲ್ ಸೇರಿದಂತೆ ಹಲವು ಘಟಾನುಘಟಿ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದ ಬೌಲರ್ ಜಾಶ್ ಹೇಜಲ್ ವುಡ್ ಮತ್ತು ಅತ್ಯುತ್ತಮ ಪಾರ್ಮ್ ನಲ್ಲಿರುವ ಬ್ಯಾಟ್ಸಮನ್ ಪೀಟಪ್ ಹ್ಯಾಂಡ್ಸ್ ಕಾಂಬ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.
ವಿಶ್ವಕಪ್ ಗಾಗಿ ಆಸಿಸ್ ಬಳಗ ಇಂತಿದೆ.
ಆ್ಯರೋನ್ ಫಿಂಚ್ (ನಾಯಕ)
ಸ್ಟೀವ್ ಸ್ಮಿತ್
ಡೇವಿಡ್ ವಾರ್ನರ್
ಉಸ್ಮಾನ್ ಖವಾಜ
ಶಾನ್ ಮಾರ್ಷ್
ಗ್ಲೇನ್ ಮ್ಯಾಕ್ಸ್ ವೆಲ್
ಮಾರ್ಕಸ್ ಸ್ಟಾಯಿನಿಸ್
ಅಲೆಕ್ಸ್ ಕರ್ರೆ
ಪ್ಯಾಟ್ ಕಮಿನ್ಸ್
ಮಿಚೆಲ್ ಸ್ಟಾರ್ಕ್
ಜೇ ರಿಚರ್ಡ್ ಸನ್
ನಾಥನ್ ಕಾಲ್ಟರ್ ನೈಲ್
ಜೇಸೆನ್ ಬೆಹಂಡ್ರೂಫ್
ನಾಥನ್ ಲಯಾನ್
ಆ್ಯಡಂ ಜಂಪಾ
SCROLL FOR NEXT