ಆಶಿಶ್ ನೆಹ್ರಾ-ವಿರಾಟ್ ಕೊಹ್ಲಿ 
ಕ್ರಿಕೆಟ್

ಮುಂಬೈ ವಿರುದ್ಧ ಆರ್‌ಸಿಬಿ ಮುಗ್ಗರಿಸಲು ನೆಹ್ರಾ ಕಾರಣನಾ? ಕೊಹ್ಲಿ ವಿರುದ್ದ ವ್ಯಾಪಕ ಟೀಕೆ, ಏನಿದು ವಿಡಿಯೋ!

ಸತತ ಆರು ಪಂದ್ಯಗಳ ಸೋಲಿನ ಬಳಿಕ ಏಳನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡ ಕೊಂಚ ಭರವಸೆ ಮೂಡಿಸಿತ್ತು. ಆದರೆ 8 ಪಂದ್ಯದಲ್ಲೂ ಮುಂಬೈ ವಿರುದ್ಧ ಕೊಹ್ಲಿ ಪಡೆ ಮತ್ತೆ ಮುಗ್ಗರಿಸಿದೆ.

ಮುಂಬೈ: ಸತತ ಆರು ಪಂದ್ಯಗಳ ಸೋಲಿನ ಬಳಿಕ ಏಳನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡ ಕೊಂಚ ಭರವಸೆ ಮೂಡಿಸಿತ್ತು. ಆದರೆ 8 ಪಂದ್ಯದಲ್ಲೂ ಮುಂಬೈ ವಿರುದ್ಧ ಕೊಹ್ಲಿ ಪಡೆ ಮತ್ತೆ ಮುಗ್ಗರಿಸಿದ್ದು ತಂಡದ ಸೋಲಿಗೆ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಕಾರಣಾನಾ? ಈ ವಿಡಿಯೋವನ್ನು ಟ್ವೀಟ್ ಮಾಡುತ್ತಾ ನೆಟಿಗರು ನಾಯಕ ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದ ವೇಳೆ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ನಿಯಂತ್ರಿಸುತ್ತಿರುವುದು ಕಂಡುಬಂದಿತ್ತು. ನಿರ್ಣಾಯಕ 19ನೇ ಓವರ್ ಪವನ್ ನೇಗಿಗೆ ನೀಡಲು ನೆಹ್ರಾ ಅವರೇ ಸಲಹೆ ಮಾಡುತ್ತಿದ್ದರು. 
ಆಶಿಶ್ ನೆಹ್ರಾ ಅವರ ಸಲಹೆಯನ್ನು ಚಾಚು ತಪ್ಪದೇ ಕೊಹ್ಲಿ ಅನುಸರಿಸುತ್ತಿದ್ದದ್ದೆ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವ್ಯಾಪಕ ಟ್ರೋಲ್ ಗಳು ಹರಿದಾಡುತ್ತಿದೆ. 19ನೇ ಓವರ್ ಅನ್ನು ಕೊಹ್ಲಿ ಬಲಗೈ ವೇಗಿ ನವದೀಪ್ ಸೈನಿಗೆ ನೀಡಲು ಮುಂದಾಗಿದ್ದರು. ಈ ಹಂತದಲ್ಲಿ ಸ್ಪಿನ್ನರ್ ಗೆ ನೀಡಲು ನೆಹ್ರಾ ಸೂಚಿಸಿದ್ದರು. ಪರಿಣಾಮ ಪವನ್ ನೇಗಿ ದಾಳಿಯಲ್ಲಿ 22 ರನ್ ಚಚ್ಚಿಸಿಕೊಂಡರು. ಇದರೊಂದಿಗೆ ಇನ್ನು ಒಂದು ಓವರ್ ಬಾಕಿ ಇರುವಂತೆ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್