ಕ್ರಿಕೆಟ್

ಕೆಕೆಆರ್ ಬಗ್ಗುಬಡಿದ ವಾರ್ನರ್-ಬೇರ್ಸ್ಟೋ; ಹೈದರಾಬಾದ್‌ಗೆ 9 ವಿಕೆಟ್ ಭರ್ಜರಿ ಜಯ!

Vishwanath S
ಹೈದರಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮತ್ತು ಬೇರ್ಸ್ಟೋ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ 9 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 159 ರನ್ ಪೇರಿಸಿತ್ತು. 160 ನರ್ ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡದ ಪರ ಡೇವಿಡ್ ವಾರ್ನರ್ 67 ಮತ್ತು ಬೇರ್ಸ್ಟೋ ಅಜೇಯ 80 ರನ್ ಗಳ ನೆರವಿನಿಂದ ಹೈದರಾಬಾದ್ ತಂಡ ಇನ್ನು 30 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು. 
ಕೋಲ್ಕತ್ತಾ ಪರ ಲಿನ್ 51, ನರೈನ್ 25, ಸಿಂಗ್ 30 ಮತ್ತು ಆ್ಯಂಡ್ರೂ ರಸೂಲ್ 15 ರನ್ ಪೇರಿಸಿದ್ದಾರೆ.
ಹೈದರಾಬಾದ್ ಪರ ಬೌಲಿಂಗ್ ನಲ್ಲಿ ಖಲೀಲ್ ಅಹ್ಮದ್ 3, ಭುವನೇಶ್ವರ್ ಕುಮಾರ್ 2, ಸಂದೀಪ್ ಶರ್ಮಾ ಮತ್ತು ರಶೀದ್ ತಲಾ 1 ವಿಕೆಟ್ ಪಡೆದಿದ್ದಾರೆ.
SCROLL FOR NEXT