ಕ್ರಿಕೆಟ್

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಥಾನಮಾನ ಪಡೆದ ಓಮನ್‌, ಅಮೆರಿಕ

Srinivasamurthy VN
ನವದೆಹಲಿ: ಜಾಗತಿಕ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಅಮೆರಿಕ ಹಾಗೂ ಓಮನ್ ಎರಡೂ ಕ್ರಿಕೆಟ್‌ ತಂಡಗಳಿಗೆ ಏಕದಿನ ಅಂತಾರಾಷ್ಟ್ರೀಯ ಸ್ಥಾನಮಾನ ಲಭಿಸಿದೆ. 
ನಮೀಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಕ್ರಿಕೆಟ್‌ ಲೀಗ್‌ ಎರಡನೇ ಡಿವಿಷನ್‌ ಸರಣಿಯಲ್ಲಿ ಅಮೆರಿಕ ತಂಡ, ಹಾಂಕಾಂಗ್‌ ತಂಡವನ್ನು 84 ರನ್‌ಗಳಿಂದ ಮಣಿಸಿ ಐಸಿಸಿ ಏಕದಿನ ಅಂತಾರಾಷ್ಟ್ರೀಯ ಸ್ಥಾನಮಾನ ಪಡೆಯಿತು. ಇದೇ ಲೀಗ್‌ ನ ಆರಂಭಿಕ ಮೂರು ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಓಮನ್‌ ಬುಧವಾರ ಸ್ಥಾನಮಾನ ಪಡೆಯಿತು. ಓಮನ್‌ ಹಾಗೂ ಅಮೆರಿಕ ಇದೀಗ ಲೀಗ್‌-2ರ ಸ್ಕಾಟ್‌ ಲೆಂಡ್‌, ನೇಪಾಳ ಹಾಗೂ ಯುಎಇ ಜತೆ ಸೇರ್ಪಡೆಗೊಂಡವು. 
2023ರಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಅರ್ಹತೆ ಪಡೆಯುವ ಹಾದಿಯಲ್ಲಿ ಈ ಮೇಲಿನ ಎಲ್ಲ ತಂಡಗಳು ಎರಡೂವರೆ ವರ್ಷದಲ್ಲಿ ಒಟ್ಟು 36 ಏಕದಿನ ಪಂದ್ಯಗಳಲ್ಲಿ ಸೆಣಸಲಿವೆ.  
"ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಥಾನಮಾನ ಪಡೆಯುವ ಹಾದಿಯಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಅಮೆರಿಕ ತಂಡ ಸಾಕಷ್ಟು ಪರಿಶ್ರಮ ಪಟ್ಟಿದೆ. ಇದರಿಂದ ತಂಡದ ಆಟಗಾರರಲ್ಲಿ ಅದ್ಭುತ ಭಾವನೆ ಉಂಟಾಗಿದೆ. ಲೀಗ್‌-2ಕ್ಕೆ (ಐಸಿಸಿ ಪುರುಷರ ವಿಶ್ವಕಪ್‌) ಅರ್ಹತೆ ಪಡೆದಿರುವುದು ಅಮೆರಿಕ ಪಾಲಿಗೆ ದೊಡ್ಡ ಸಾಧನೆಯಾಗಿದೆ ಎಂದು ಯುಎಸ್‌ ಕ್ರಿಕೆಟ್‌ ತಂಡದ ತರಬೇತುದಾರ ಪುಗುಡು ಡಸ್ಸನಾಯಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
SCROLL FOR NEXT