ಚೆನ್ನೈ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ 46 ರನ್ ಗಳಿಂದ ಸೋಲು ಕಂಡಿದೆ. ನಾಯಕ ಎಂಎಸ್ ಧೋನಿಗೆ ವಿಶಾಂತ್ರಿ ನೀಡಲಾಗಿದ್ದು ಸುರೇಶ್ ರೈನಾ ತಂಡವನ್ನು ಮುನ್ನಡೆಸಿದ್ದರು.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಿತ್ತು. 156 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ 109 ರನ್ ಗಳಿಗೆ ಆಲೌಟ್ ಆಗಿದ್ದು 46 ರನ್ ಗಳಿಂದ ಸೋಲು ಕಂಡಿದೆ.
ಮುಂಬೈ ಪರ ರೋಹಿತ್ ಶರ್ಮಾ 67, ಲೆವಿಸ್ 32 ಮತ್ತು ಹಾರ್ದಿಕ್ ಪಾಂಡ್ಯ 23 ರನ್ ಪೇರಿಸಿದ್ದರು.
ಚೆನ್ನೈ ಪರ ಮುರಳಿ ವಿಜಯ್ 38, ಡ್ವೈನ್ ಬ್ರಾವೋ 20 ಮತ್ತು ಸ್ಟಾನ್ಟರ್ 22 ರನ್ ಪೇರಿಸಿದ್ದಾರೆ.
ಮುಂಬೈ ಪರ ಬೌಲಿಂಗ್ ನಲ್ಲಿ ಮಲಿಂಗ 4, ಕೃನಾಲ್ ಪಾಂಡೆ, ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics