ಲಂಡನ್ : ನಿಷೇಧಿತ ಡ್ರಗ್ಸ್ ಸವೇನೆ ಹಿನ್ನೆಲೆಯಲ್ಲಿ ಅಲೆಕ್ಸ್ ಹೆಲ್ಸ್ ಅವರಿಗೆ 21 ದಿನ ನಿರ್ಬಂಧ ವಿಧಿಸಿರುವುದರಿಂದ ಅವರನ್ನು ಮುಂದಿನ ವಿಶ್ವಕಪ್ ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿದೆ.
ಇಂಗ್ಲೆಂಡ್ ಪುರುಷರ ಕ್ರಿಕೆಟ್ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅಶ್ಲೆ ಗಿಲ್ಸ್ ಹಾಗೂ ಇಡಿ ಸ್ಮಿತ್ ನೇತೃತ್ವದ ಇಂಗ್ಲೆಂಡ್ ಆಯ್ಕೆದಾರರು ತಂಡದ ಹಿತಾಸಕ್ತಿಯಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಇಸಿಬಿ ಹೇಳಿದೆ.
ತಂಡದೊಳಗೆ ಉತ್ತಮ ವಾತಾವರಣ ಸೃಷ್ಟಿಸಿ ಅನಗತ್ಯ ಗೊಂದಲ ಮೂಡದಂತೆ ಗಮನ ಹರಿಸಲಾಗಿದೆ. ಈ ನಿರ್ಣಾಯಕ ಹಂತದಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿದ್ದು ಯಶಸ್ಸಿನತ್ತ ಸಾಗಿಸುವುದರತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಮೈಲಹೈಡ್ ನಲ್ಲಿ ಶುಕ್ರವಾರ ನಡೆಯಲಿರುವ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲೂ ಹೆಲ್ಸ್ ಭಾಗವಹಿಸುತ್ತಿಲ್ಲ. ಅಲ್ಲದೇ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿ ಹಾಗೂ ಇಂಗ್ಲೆಂಡ್ ಟಿ-20 ತಂಡದಿಂದಲೂ ಅವರನ್ನು ಕೈ ಬಿಡಲಾಗಿದೆ.
ತುಂಬಾ ಯೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಅಲೆಕ್ಸ್ ಅವರ ಬದುಕಿನ ಕೊನೆ ಇಲ್ಲ. ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಪಿಸಿಎ ಸಹಕಾರ ಮುಂದುವರೆಸಲಿವೆ. ದೇಶಿಯ ನಾಟ್ಟಿಗ್ಯಾಮ್ ಶೈರ್ ನಲ್ಲಿ ಆಡಲು ಅಗತ್ಯ ಸಹಾಕರ ನೀಡಲಾಗುವುದು, ವೃತ್ತಿಪರ ಕ್ರಿಕೆಟ್ ಆಟಗಾರರು ಏನನ್ನು ಬೇಕಾಗುತ್ತದೆಯೋ ಅದೆಲ್ಲಾ ಸಹಾಯ ಮಾಡುವುದಾಗಿ ಗಿಲ್ಸ್ ಹೇಳಿದ್ದಾರೆ.