ಡೇವಿಡ್ ವಾರ್ನರ್ ಬಿರುಸಿನ ಆಟದ ಪರಿಣಾಮ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ XI ವಿರುದ್ಧ 45 ರನ್ ಗಳ ಜಯ ದಾಖಲಿಸಿದ್ದು, ಪ್ಲೇ ಆಫ್ ಗೆ ಹೋಗುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಟೂರ್ನಮೆಂಟ್ ನ ಕೊನೆಯ ಪಂದ್ಯವನ್ನಾಡಿದ ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ 81 ರನ್ ಗಳಿಸುವ ಮೂಲಕ ಈ ವರ್ಷದ ಐಪಿಎಲ್ ನ 12 ಇನ್ನಿಂಗ್ಸ್ ನಲ್ಲಿ ಒಟ್ಟಾರೆ 692 ರನ್ ಕಲೆಹಾಕಿದ್ದಾರೆ. ಹೈದರಾಬಾದ್ ಸನ್ ರೈಸರ್ಸ್ ತಂಡ 12 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ದಾಖಲಿಸಿದ್ದು, 4 ನೇ ಸ್ಥಾನದಲ್ಲಿದೆ.
ಡೇವಿಡ್ ವಾರ್ನರ್ (57 ಎಸೆತಗಳಲ್ಲಿ 81 ರನ್), ವೃದ್ಧಿಮಾನ್ ಸಾಹ (28 ರನ್ ), ಮನೀಷ್ ಪಾಂಡೆ (36) ರನ್ ಗಳ ಸಹಾಯದಿಂದ ಹೈದರಾಬಾದ್ ತಂಡ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತ್ತು.
ಹೈದರಾಬಾದ್ ತಂಡ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡದ ಪರ ಕೆ.ಎಲ್ ರಾಹುಲ್ (79 ರನ್) ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದು ವ್ಯರ್ಥವಾಯಿತು. ಅಂತಿಮವಾಗಿ ಹೈದರಾಬಾದ್ ಬೌಲರ್ ಗಳು ನಿಗದಿತ 20 ಓವರ್ ಗಳಲ್ಲಿ ಪಂಜಾಬ್ ತಂಡವನ್ನು 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics