ಪಾಕ್ ಮಾಜಿ ಕ್ರಿಕೆಟಿಗರು 
ಕ್ರಿಕೆಟ್

2003 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲಿನ ರಹಸ್ಯ ಬಿಚ್ಚಿಟ್ಟ ಶೊಯೆಬ್ ಅಖ್ತರ್‌

ಕಳೆದ 2003 ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆರು ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ರಹಸ್ಯ ದುಃಖವೊಂದನ್ನು ಮಾಜಿ ವೇಗಿ ಶೊಯೆಬ್‌ ಅಖ್ತರ್‌ ಬಹಿರಂಗಪಡಿಸಿದ್ದಾರೆ.

ನವದೆಹಲಿ: ಕಳೆದ 2003 ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆರು ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ರಹಸ್ಯ ದುಃಖವೊಂದನ್ನು ಮಾಜಿ ವೇಗಿ ಶೊಯೆಬ್‌ ಅಖ್ತರ್‌ ಬಹಿರಂಗಪಡಿಸಿದ್ದಾರೆ.
2003 ಮಾರ್ಚ್‌ 1 ರಂದು ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ ನಡೆದಿದ್ದ ಗುಂಪು ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 274 ರನ್‌ಗಳನ್ನು ಭಾರತಕ್ಕೆ ಗುರಿ ನೀಡಿತ್ತು. ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತವನ್ನು ಕಟ್ಟಿ ಹಾಕುವಲ್ಲಿ ಪಾಕ್‌ ವಿಫಲವಾಗಿತ್ತು. ಸಚಿನ್‌ ತೆಂಡೂಲ್ಕರ್‌ ಅವರ 98 ರನ್‌ಗಳಿಂದ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಭಾರತ ಜಯಭೇರಿ ಬಾರಿಸಿತ್ತು. 
ಈ ಕುರಿತು ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್‌, " ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯಂತ ನಿರಾಸೆಯ ಪಂದ್ಯ ಅದಾಗಿತ್ತು. ನಮ್ಮ ತಂಡದಲ್ಲಿ ಅತ್ಯಂತ ಉತ್ತಮ ಬೌಲಿಂಗ್‌ ಲೈನ್‌ ಅಪ್‌ ಇದ್ದರೂ 274 ರನ್‌ಗಳಿಗೆ ಭಾರತವನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
"ಪಂದ್ಯದ ಹಿಂದಿನ ರಾತ್ರಿ, ತನ್ನ ಎಡ ಮೊಣಕಾಲಿಗೆ 4-5 ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಿತ್ತು. ಏಕೆಂದರೆ ಅದು ನಿಶ್ಚೇಷ್ಟಿತವಾಯಿತು. "ಚುಚ್ಚುಮದ್ದಿನಿಂದಾಗಿ ನನ್ನ ಎಡ ಮೊಣಕಾಲಿನಲ್ಲಿ ನೀರು ತುಂಬಿತ್ತು ಮತ್ತು ಅದರಲ್ಲಿ ಯಾವುದೇ ಸಂವೇದನೆ ಇರಲಿಲ್ಲ." ಎಂದರು.
"ನಮ್ಮ ಇನ್ನಿಂಗ್ಸ್ ಮುಗಿದ ನಂತರ, ನಾವು ಬಹುಶಃ 30-40 ರನ್ ಗಳಿಸಬೇಕಾಗಿತ್ತು ಎಂದು ನಾನು ನನ್ನ ತಂಡದ ಆಟಗಾರರಿಗೆ ಹೇಳಿದೆ. ಆದಾಗ್ಯೂ, ತಂಡದ ಎಲ್ಲ ಆಟಗಾರರು '273 ರನ್‌ ಒಳಗಾಗಿ ಭಾರತವನ್ನು ಆಲೌಟ್‌ ಮಾಡಬಹುದು ಎಂದು ಹೇಳಿದ್ದರು. ಪಿಚ್ ಬ್ಯಾಟಿಂಗ್ ಮಾಡಲು ಉತ್ತಮವಾಗಿತ್ತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್‌ಗೆ ಅನುಕೂಲಕರವಾಗಿತ್ತು ಎಂದು ನನಗೆ ಅಂದು ಅರಿವಾಗಿತ್ತು ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ಶೊಯೆಬ್‌ ಅಖ್ತರ್‌ ತನ್ನ ಯೂ ಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೋದಲ್ಲಿ ಹೇಳಿದ್ದಾರೆ. 
ನಾವು ಬೌಲಿಂಗ್‌ ಆರಂಭಿಸುವುದಕ್ಕೂ ಮುನ್ನ ನನ್ನ ಎಡಮೊಣಕಾಲು ಸಹಕರಿಸುತ್ತಿಲ್ಲ ಎಂದು ಸಹ ಆಟಗಾರರಿಗೆ ಹೇಳಿದ್ದೆ. ಆದ್ದರಿಂದ ಸಹಜವಾಗಿ ಬೌಲಿಂಗ್‌ ಲೈನ್‌ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರೇಂದ್ರ ಸೆಹ್ವಾಗ್ ಅವರು ಇಬ್ಬರೂ ಅತ್ಯುತ್ತಮವಾಗಿ ಆರಂಭ ಪಡೆದರು. ನನ್ನ ಬೌಲಿಂಗ್‌ನಲ್ಲಿ ಸಚಿನ್‌ ಆಡಿದ ಆಟ ಅದ್ಭುತವಾಗಿತ್ತು ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು. 
" ಅವತ್ತಿನ ದಿನ ಬೌಲಿಂಗ್‌ ದಾಳಿ ನಡೆಸುವ ಬಗ್ಗೆ ಸುಳಿವು ಇರಲಿಲ್ಲ. ಅನಿರೀಕ್ಷಿತವಾಗಿ ನಾಯಕ ವಖಾರ್‌ ಯುನಿಸ್‌ ಅವರು ನನ್ನನ್ನು ಬೌಲಿಂಗ್‌ ಗೆ ನಿಲ್ಲಿಸಿದರು. ತುಂಬಾ ಸಮಯದ ನಂತರ ಅವರನ್ನು ಮತ್ತೇ ಬೌಲಿಂಗ್‌ ಕರೆ ತಂದರು. ಶಾರ್ಟ್‌ ರನ್‌ ಅಪ್‌ನಿಂದ ಬೌಲಿಂಗ್‌ ಮಾಡಿದ ನಾನು 98 ರನ್‌ ಗಳಿಸಿದ್ದ ಸಚಿನ್‌ ತೆಂಡೂಲ್ಕರ್‌ ಅವರ ವಿಕೆಟ್‌ ಪಡೆದುಕೊಂಡೆ. ಕೊನೆಯಲ್ಲಿ ಮಾಡಿದ್ದ ಬೌಲಿಂಗ್‌ ಅನ್ನು ನಾನು ಮೊದಲಿನಿಂದಲೂ ಮಾಡಬೇಕಿತ್ತು ಎಂದು ನಾಯಕನ ಬಳಿ ಹೇಳಿಕೊಂಡಿದ್ದೆ. ಆದರೆ, ಸಮಯ ಮಿತಿ ಮೀರಿ  ಹೋಗಿತ್ತು, ಭಾರತ ಗೆಲುವಿನ ಸಮೀಪ ತಲುಪಿತ್ತು ಎಂದು ಹೇಳಿದರು. 
ಈ ಪಂದ್ಯದಲ್ಲಿ ನಾನು 72 ರನ್‌ ನೀಡಿ ಸಚಿನ್‌ ಅವರ ಏಕೈಕ ವಿಕೆಟ್‌ ಪಡೆದಿದ್ದೆ. ಈ ಪಂದ್ಯದ ವೇಳೆ ನಾನು ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿದ್ದೆ. ಜತೆಗೆ, ವಖಾರ್‌ ಯುನಿಸ್‌ ಅವರ ಕಳಪೆ ನಾಯಕತ್ವದಿಂದ ಅದು ನಾವು ಸೋಲು ಒಪ್ಪಿಕೊಳ್ಳಬೇಕಾಗಿತ್ತು ಎಂದು ಅಖ್ತರ್‌ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT