ಕ್ರಿಕೆಟ್

ಭಾರತ ವಿರುದ್ಧದ ಟೆಸ್ಟ್ ಸರಣಿ: 140 ಕೆಜಿ ತೂಕದ ವಿಂಡೀಸ್ ದೈತ್ಯ ಆಟಗಾರ ಫೀಲ್ಡ್ ಗೆ ಎಂಟ್ರಿ, ಯಾರದು ಗೊತ್ತಾ?

Nagaraja AB

ಸೈಂಟ್ ಜಾನ್ಸ್:  ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ 13 ಮಂದಿ ಆಟಗಾರರನ್ನೊಳಗೊಂಡ ವೆಸ್ಟ್ ಇಂಡೀಸ್ ತಂಡವನ್ನು ಇಂದು ಪ್ರಕಟಿಸಲಾಗಿದೆ.

ರಾಬರ್ಟ್ ಹೇನ್ಸ್ ನೇತೃತ್ವದ ಸಿಡಬ್ಲ್ಯುಐನ ಮಧ್ಯಂತರ ಆಯ್ಕೆ ಸಮಿತಿಯು ಆಂಟಿಗುವಾದ ಆಪ್ ಸ್ಪಿನ್ನರ್ ರಹಕೀಮ್ ಕಾರ್ನ್ ವಾಲ್ ಅವರನ್ನು ತಂಡದಲ್ಲಿ ಹೊಸದಾಗಿ ಸೇರಿಸಿಕೊಂಡಿದೆ. 2014ರಲ್ಲಿ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆಡಿರುವ ರಹಕೀಮ್ ಕಾರ್ನ್ ವಾಲ್ , 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 23.90 ರ ಸರಾಸರಿಯಲ್ಲಿ 2224 ರನ್ ಗಳ ಜೊತೆಗೆ 260 ರನ್ ವಿಕೆಟ್ ಕಬಳಿಸಿದ್ದಾರೆ. ಇತ್ತೀಚಿಗೆ ಭಾರತ ಎ ವಿರುದ್ಧದ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.

ಹಾಗಾದರೆ ರಹಕೀಮ್ ಕಾರ್ನ್ ವಾಲ್ ಬಗ್ಗೆ ವಿಶೇಷ ಏನು ಅಂತೀರಾ? ಖಂಡಿತಾ ಇದೆ. 26 ವರ್ಷದ ಈ ದೈತ್ಯ ಮಾನವ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಲಿದ್ದಾರೆ. 6.6 ಅಡಿ ಎತ್ತರದ  ಕಪ್ಪು ಬಣ್ಣದ ಈ ದೈತ್ಯಮಾನವ ಬರೋಬ್ಬರಿ 140 ಕೆಜಿ ತೂಕ ಇದ್ದಾರೆ.  ಒಂದು  ವೇಳೆ ಭಾರತ ವಿರುದ್ಧದ ಪಂದ್ಯದಲ್ಲಿ ಇವರು ಆಡಿದ್ದರೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚೊಚ್ಚಲ ಬಾರಿಗೆ ದೈತ್ಯ ಮಾನವನ ಪ್ರವೇಶವಾದಂತಾಗುತ್ತದೆ. 

ಈ ಹಿಂದೆ ದೈಹಿಕತೆ ವಿಚಾರವಾಗಿ ಕಾರ್ನ್ ವಾಲ್ ಅವರನ್ನು ರಾಷ್ಟ್ರೀಯ ತಂಡದಿಂದ ಕೈ ಬಿಡಲಾಗಿತ್ತು. ಅನೇಕ ದಿನಗಳಿಂದಲೂ ರಹಕೀಮ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮ್ಯಾಚ್ ವಿನ್ನರ್ ಆಗಿಯೂ ಸಾಬೀತುಪಡಿಸಿದ್ದಾರೆ. ಆದ್ದರಿಂದ ಈ ಬಾರಿಯ ಟೆಸ್ಟ್ ಸರಣಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ರಾಬರ್ಟ್ ಹೇನ್ಸ್ ಹೇಳಿದ್ದಾರೆ.ಎಕ್ಸ್ ಟ್ರಾ ಬೌನ್ಸ್ ಹಾಗೂ ಶಾರ್ಪ್ ಟರ್ನ್ ಬೌಲಿಂಗ್ ದಾಳಿಯಿಂದಾಗಿ ನಾವು ಎದುರಾಳಿ ಮೇಲೆ ದಾಳಿ ಮಾಡಲು ರಹಕೀಮ್ ಉತ್ತಮ ಬೌಲರ್ ಆಗಿದ್ದಾರೆ. ಬ್ಯಾಟಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಈ ತಿಂಗಳ ಕೊನೆಯಲ್ಲಿ ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ  ಕಾರ್ನ್‌ವಾಲ್ ತಮ್ಮ ಬಹುನಿರೀಕ್ಷಿತ ಟೆಸ್ಟ್ ಪಂದ್ಯಕ್ಕೆ ತವರು ಕ್ಷೇತ್ರದಿಂದಲೇ ಪ್ರಾರಂಭ ಮಾಡಲಿದ್ದಾರೆ. ಐದು ವರ್ಷಗಳ ಹಿಂದಿನಿಂದಲೂ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆಡುತ್ತಿರುವ ರಹಕೀಮ್ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಐದು ವರ್ಷಗಳ ಹಿಂದೆ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದಾಗಿನಿಂದ, ವೆಸ್ಟ್ ಇಂಡೀಸ್ ಚಾಂಪಿಯನ್‌ಶಿಪ್ ಮತ್ತು ವೆಸ್ಟ್ ಇಂಡೀಸ್ "ಎ" ತಂಡದಲ್ಲಿ ಲೀವಾರ್ಡ್ ದ್ವೀಪಗಳ ಚಂಡಮಾರುತಗಳಿಗಾಗಿ ಮಾಡಿದ ಅದ್ಭುತ ದಾಖಲೆಗಾಗಿ ಕಾರ್ನ್‌ವಾಲ್‌ಗೆ ಬಹುಮಾನ ನೀಡಲಾಗಿದೆ.

ಭಾರತ ವಿರುದ್ಧ ವೀಂಡಿಸ್ ಟೆಸ್ಟ್ ತಂಡ ಇಂತಿದೆ: ಜಾಸನ್ ಹೊಲ್ಡರ್ ( ನಾಯಕ) ಕೆ. ಬ್ರೈಥ್ ವೈಟ್ , ಡಾರೇನ್ ಬ್ರಾವೋ, ಶಮ್ರಾ ಬ್ರೂಕ್ಸ್, ಜಾನ್ ಕ್ಯಾಂಪ್ ಬೆಲ್, ರೊಸ್ಟನ್ ಚೇಸ್ , ರಹಕೀಮ್ ಕಾರ್ನ್ ವಾಲ್, ಶೇನ್ ಡೌರಿಚ್, ಶಾನಾನ್ ಗ್ಯಾಬ್ರಿಯೆಲ್, ಶಿಮ್ರಾನ್ ಹೆಟ್ಮಿಯರ್ ಶೈ ಹೋಪ್, ಕೀಮೊ ಪೌಲ್, ಕೇಮರ್ ರೋಚ್

SCROLL FOR NEXT