ಕ್ರಿಕೆಟ್

ಮಾಜಿ ಕ್ರಿಕೆಟಿಗ ಚಂದ್ರಶೇಖರ್ ಸತ್ತಿದ್ದು ಹೃದಯಾಘಾತದಿಂದಲ್ಲ ಆತ್ಮಹತ್ಯೆ: ಕ್ರಿಕೆಟ್ ದಿಗ್ಗಜರ ದಿಗ್ಭ್ರಮೆ

Shilpa D

ಚೆನ್ನೈ:  ಟೀಂ ಇಂಡಿಯಾ ಮಾಜಿ ಆಟಗಾರ ಬಿ.ವಿ ಚಂದ್ರಶೇಖರ್ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು, ಆದರೆ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು. ಹಲವು ಕ್ರಿಕೆಟಿಗರು ಆಘಾತ ವ್ಯಕ್ತ ಪಡಿಸಿದ್ದಾರೆ.

ನಿನ್ನೆ ಸಂಜೆ ಹೃದಯಾಘಾತದಿಂದ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಅವರು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ

ಸ್ಫೋಟಕ ಆರಂಭಿಕ ಆಟಗಾರನಾಗಿ ಗುರುತಿಸಿಕೊಂಡಿದ್ದ ತಮಿಳುನಾಡು ಮೂಲದ ಎಡಗೈ ಆಟಗಾರ ಚಂದ್ರಶೇಖರ್ ಅವರ  58ನೇ ಹುಟ್ಟುಹಬ್ಬಕ್ಕೆ  ಐದು ದಿನಗಳು ಬಾಕಿ ಇರುವಾಗ ಈ  ಘಟನೆ ನಡೆದಿದೆ.

ಪತ್ನಿ ಹಾಗೂ ಒಬ್ಬ ಪುತ್ರಿಯನ್ನು ಅಗಲಿರುವ ಚಂದ್ರಶೇಖರ್  1988-90 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು, ನಿವೃತ್ತಿ ನಂತರ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು,. ಕೋಚ್ ಆಗಿ, ಕಮೆಂಟೇಟರ್ ಆಗಿ ಕೆಲಸ ಮಾಡಿದ್ದರು.

ನಿನ್ನೆ ಸಂಜೆ ಸುಮಾರು 5.45ರ ಹೊತ್ತಿಗೆ ಪತ್ನಿ ಜೊತೆ ಟೀ ಕುಡಿದಿದ್ದಾರೆ, ಅದಾದ ನಂತರ  ತಮ್ಮ ರೂಂ ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಸುಮಾರು 2 ಗಂಟೆಗಳಾದರು ಅವರು ಹೊರಗೆ ಬಾರದಿದ್ದಾಗ ಪತ್ನಿ ರೂ ಬಾಗಿಲು ತಟ್ಟಿದ್ದಾರೆ, ಕೊನೆಗೆ ಆತಂಕಗೊಂಡು ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದಾಗ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ, ಈ ಸಂಬಂಧ ಮೈಲಾಪುರೆ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ.

ಇನ್ನೂ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕ್ರಿಕೆಟ್ ಬಳಗ ಆಘಾತ ವ್ಯಕ್ತ ಪಡಿಸಿದೆ.ಕೆ. ಶ್ರೀಕಾಂತ್, ಹರ್ ಭಜನ್ ಸಿಂಗ್, ಅನಿಲ್ ಕುಂಬ್ಳೆ, ಸುರೇಶ್ ರೈನಾ ಸೇರಿದಂತೆ ಹಲವರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ.

SCROLL FOR NEXT