ಕ್ರಿಕೆಟ್

15 ದಿನಗಳ ಸೇನಾ ಸೇವೆ ಪೂರೈಸಿ ಮನೆಗೆ ಮರಳಿದ ಧೋನಿ

Raghavendra Adiga

ಲೇಹ್: ಪ್ಯಾರಾ  ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ  ಭಾರತೀಯ  ಕ್ರಿಕೆಟ್ ತಂಡದ  ಮಾಜಿ ನಾಯಕ ಎಂ.ಎಸ್.ಧೋನಿ ಅದನ್ನು ಯಶಸ್ವಿಯಾಗಿ ಪೂರೈಸಿ  ವಾಪಸ್ಸು ಬಂದಿದ್ದಾರೆ.

ದೆಹಲಿಗೆ ತೆರಳುವ ಸಂದರ್ಭದಲ್ಲಿ ಸೇನೆಯಲ್ಲಿ  ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ  ಹೊಂದಿರುವ ಧೋನಿ, ಲಡಾಖ್‌ನ ಲೇಹ್ ವಿಮಾನ ನಿಲ್ದಾಣದಲ್ಲಿ  ಕಾಣಿಸಿಕೊಂಡರು.  ಧೋನಿ ಭಾರತೀಯ ಸೇನೆಯ 106  ಟಿಎ ಪ್ಯಾರಾ ಬೆಟಾಲಿಯನ್‌ ನಲ್ಲಿ  15 ದಿನಗಳ ಕಾಲ ಸೇವೆ ಸಲ್ಲಿಸಿದರು. ಜುಲೈ 30ರಿಂದ  ಸೇನಾ ಬೆಟಾಲಿಯನ್‌ ತರಬೇತಿ ಪಡೆಯುವ ಮೂಲಕ  ಅಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಕಾಶ್ಮೀರ ಕಣಿವೆಯಲ್ಲಿ ಸೈನಿಕರೊಂದಿಗೆ  ಪಹರೆ,  ಕಾವಲು ಮತ್ತು  ಹೊರ ಠಾಣೆಗಳ  ಕಾವಲು  ಕರ್ತವ್ಯಗಳನ್ನು ನಿರ್ವಹಿಸಿದ್ದರು.  ಕಾಶ್ಮೀರದಲ್ಲಿ ಉಗ್ರರ  ವಿರುದ್ಧದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ಟರ್ ಫೋರ್ಸ್‌ನಲ್ಲಿಯೂ ಧೋನಿ ಸೇವೆ ಸಲ್ಲಿಸಿದ್ದರು.  ಸೇನೆಯಲ್ಲಿ  ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ  ಹೊಂದಿರುವ ಧೋನಿ,  ಯೋಧರೊಂದಿಗೆ  ಕೆಲಕಾಲ ಕರ್ತವ್ಯ ನಿರ್ವಹಿಸಲು  ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳದೆ  ಭಾರತೀಯ ತಂಡದಿಂದ ದೂರ ಉಳಿದಿದ್ದಾರೆ. 

ಧೋನಿ ಮೊದಲ ಬಾರಿಗೆ 2015 ರಲ್ಲಿ ಆಗ್ರಾದಲ್ಲಿ  ಸೇನಾ  ಪ್ಯಾರಾ ಟ್ರೂಪರ್ ಆಗಿ  ಒಂದು ತಿಂಗಳು ತರಬೇತಿ ಪಡೆದಿದ್ದರು.  ವಿಮಾನಗಳಿಂದ  ಪ್ಯಾರಾಚೂಟ್ ಮೂಲಕ  ಕೆಳಗೆ ದುಮುಕುವಂತಹ  ಕಠಿಣ ತರಬೇತಿಯನ್ನು ಪಡೆದುಕೊಂಡಿದ್ದರು. 1, 250 ಅಡಿ ಎತ್ತರದಲ್ಲಿರುವ ಎಎನ್ 32  ಸೇನಾ  ವಿಮಾನದಿಂದ ಜಿಗಿದು ಸುರಕ್ಷಿತವಾಗಿ ನೆಲಕ್ಕೆ ಇಳಿದಿದ್ದ  ಅವರು ಪ್ಯಾರಾಟ್ರೂಪರ್ ಆಗಿ ಅರ್ಹತೆ ಪಡೆದುಕೊಂಡವರಾಗಿದ್ದಾರೆ.

SCROLL FOR NEXT