ಬೆನ್ ಸ್ಟೋಕ್ಸ್ 
ಕ್ರಿಕೆಟ್

ಆ್ಯಶಸ್: ಮತ್ತೆ ಆಂಗ್ಲರ ಪಾಲಿಗೆ ಆಪದ್ಭಾಂದವನಾದ ಬೆನ್ ಸ್ಟೋಕ್ಸ್, 3ನೇ ಪಂದ್ಯ ಗೆದ್ದ ಇಂಗ್ಲೆಂಡ್!

ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಸಾಹಸದಿಂದಾಗಿ ಆ್ಯಶಸ್ ಸರಣಿಯ ಆಸ್ಟ್ರೇಲಿಯ ವಿರುದ್ಧದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕ ಗೆಲುವು ಸಾಧಿಸಿದೆ.

ಪ್ರಬಲ ಆಸಿಸ್ ವಿರುದ್ಧ 1 ವಿಕೆಟ್ ಗಳ ರೋಚಕ ಜಯ ಸಾಧಿಸಿದ ಇಂಗ್ಲೆಂಡ್

ಲೀಡ್ಸ್‌: ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಸಾಹಸದಿಂದಾಗಿ ಆ್ಯಶಸ್ ಸರಣಿಯ ಆಸ್ಟ್ರೇಲಿಯ ವಿರುದ್ಧದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕ ಗೆಲುವು ಸಾಧಿಸಿದೆ.

ಲೀಡ್ಸ್‌ನ ಹೆಡ್ಡಿಂಗ್ಲಿಯಲ್ಲಿ ಭಾನುವಾರ ನಡೆದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 3ನೇ ಆ್ಯಶಸ್ ಟೆಸ್ಟ್‌ ನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಪವಾಡ ರೀತಿಯಲ್ಲಿ ಕೇವಲ 1 ವಿಕೆಟ್ ಗಳ ಗೆಲುವು ಸಾಧಿಸಿದೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ಸ್ಫೋಟಕ ಸಾಹಸದ ಬ್ಯಾಟಿಂಗ್‌ ನಿಂದಾಗಿ ಇಂಗ್ಲೆಂಡ್ ಅಚ್ಚರಿಯ ಗೆಲುವು ಸಾಧಿಸಿದೆ.

2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 362 ರನ್ ಗಳ ಬೃಹತ್ ಗುರಿಯನ್ನು ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡಕ್ಕೆ ಜಾಶ್ ಹೇಜಲ್ ವುಡ್ ಮಾರಕವಾಗಿ ಪರಿಣಮಿಸಿದರು. ಆದರೆ ಆಸಿಸ್ ವಿರುದ್ಧ ಸಾಹಸದ ಶತಕ ಸಿಡಿಸಿದ ಬೆನ್ ಸ್ಟೋಕ್ಸ್ (135 ರನ್) ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿಯಾದರು. ಇಂಗ್ಲೆಂಡ್ ತಂಡ 286 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ ಗೆ ಅಂಟಿಕೊಂಡ ಬೆನ್ ಸ್ಟೋಕ್ಸ್ ಅಂತಿಮ ರನ್ ವರೆಗೂ ಕ್ರೀಸ್ ನಲ್ಲಿದ್ದು ಇಂಗ್ಲೆಂಡ್ ಪಾಲಿಗೆ ಮತ್ತೊಂದು ಅಮೋಘ ಜಯ ತಂದಿತ್ತರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT