ಕ್ರಿಕೆಟ್

ಕ್ರಿಕೆಟ್ ಲೋಕದ ಈ ಅಪರೂಪದ ದಾಖಲೆಯನ್ನು ಮುರಿಯಲು 'ಹಿಟ್ ಮ್ಯಾನ್' ನಿಂದ ಮಾತ್ರ ಸಾಧ್ಯ!

Srinivasamurthy VN

ಅಡಿಲೇಡ್​: ಜಾಗತಿಕ ಕ್ರಿಕೆಟ್ ನ ಈ ಅಪರೂಪದ ದಾಖಲೆಯನ್ನು ಮುರಿಯಲು ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾರಿಂದ ಮಾತ್ರ ಸಾಧ್ಯ ಎಂದು ಆಸಿಸ್ ಕ್ರಿಕೆಟ್ ದೈತ್ಯ ಡೇವಿಡ್ ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

ಅಡಿಲೇಡ್ ನಲ್ಲಿ ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಡೇವಿಡ್ ವಾರ್ನರ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನೆಡೆಸಿದ್ದರು. ಈ ಹೊತ್ತಿಗೆ ಆಸಿಸ್ ತಂಡ 3 ವಿಕೆಟ್ ನಷ್ಟಕ್ಕೆ 589ರನ್ ಗಳಿಸಿತ್ತು. ಈ ವೇಳೆ ಡೇವಿಡ್ ವಾರ್ನರ್ 335 ರನ್​ಗಳಿಸಿ 400 ರನ್ ಗಳತ್ತ ದಾಪುಗಾಲಿರಿಸಿದ್ದರು. ಆದರೆ ಈ ವೇಳೆಗೆ ಆಸ್ಟ್ರೇಲಿಯಾದ ನಾಯಕ ಟಿಮ್ ಪೈನೆ ಇನ್ನಿಂಗ್ಸ್​​ ಡಿಕ್ಲೇರ್​ ಘೋಷಿಸಿದ್ದರು. ಇದರಿಂದ 65 ರನ್​ಗಳಿಂದ ಲಾರಾ ದಾಖಲೆ ಮುರಿಯುವ ಅವಕಾಶವನ್ನು ವಾರ್ನರ್ ಕಳೆದುಕೊಂಡರು.

ಇನ್ನಿಂಗ್ಸ್​ ಮುಕ್ತಾಯದ ನಂತರ ಮಾತನಾಡಿದ ವಾರ್ನರ್, 400ರನ್ ದಾಖಲೆ ಮಿಸ್ ಆಗಿದ್ದಕ್ಕೆ ಬೇಸರವಿಲ್ಲ. ಆದರೆ ಖಂಡಿತಾ ಟೆಸ್ಟ್​​ ಕ್ರಿಕೆಟ್​​ನಲ್ಲಿ ಲಾರಾ ಅವರ ಔಟಾಗದೆ 400 ರನ್ ಗಳಿಸಿದ ದಾಖಲೆಯನ್ನು ಮುರಿಯಬಹುದು. 
ಮುಂದಿನ ದಿನಗಳಲ್ಲಿ ಒಂದಲ್ಲಾ ಒಂದು ದಿನ ಭಾರತದ ಬ್ಯಾಟ್ಸ್​​ ಮನ್ ರೋಹಿತ್ ಶರ್ಮಾ ಈ ದಾಖಲೆಯನ್ನು ಮುರಿಯಬಹುದು. ಅ ಸಾಮರ್ಥ್ಯ ರೋಹಿತ್ ಶರ್ಮಾ ಅವರಲ್ಲಿದೆ ಎಂದು ವಾರ್ನರ್ ಅಭಿಪ್ರಾಯಪಟ್ಟರು.

ಕ್ರಿಕೆಟ್​​ನ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್​ಗಳಲ್ಲಿ ಒಬ್ಬರಾದ ವೆಸ್ಟ್​ ಇಂಡೀಸ್​ನ ಬ್ರಿಯಾನ್ ಲಾರಾ ​​2004 ರಲ್ಲಿ ಇಂಗ್ಲೆಂಡ್​ ವಿರುದ್ಧ ಔಟಾಗದೆ 400 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.

SCROLL FOR NEXT