ಕ್ರಿಕೆಟ್

ಅಂಡರ್ 19 ವಿಶ್ವಕಪ್ ಗೆ ಭಾರತ ತಂಡ ಪ್ರಕಟ; ಪ್ರಿಯಂ ಗಾರ್ಗ್ ಸಾರಥ್ಯ!

Srinivasamurthy VN

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಅಂಡರ್ 19 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಉದಯೋನ್ಮುಖ ಆಟಗಾರ ಪ್ರಿಯಂ ಗಾರ್ಗ್ ಸಾರಥ್ಯವಹಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತಂಡವನ್ನು ಪ್ರಕಟಿಸಿದ್ದು, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ನಲ್ಲಿ 15 ಮಂದಿ ಸದಸ್ಯ ಭಾರತ ತಂಡವನ್ನು ಉತ್ತರ ಪ್ರದೇಶದ ಬ್ಯಾಟ್ಸ್‌ ಮನ್ ಪ್ರಿಯಂ ಗಾರ್ಗ್ ಮುನ್ನಡೆಸಲಿದ್ದಾರೆ. ಐಸಿಸಿ ಕಿರಿಯರ ವಿಶ್ವಕಪ್ ಜನವರಿ 17ರಿಂದ ಫೆಬ್ರವರಿ 9ರ ವರೆಗೆ ನಡೆಯಲಿದೆ. 

19 ವರ್ಷದ ಗಾರ್ಗ್ ಎಡಗೈ ಅಗ್ರ ಕ್ರಮಾಂಕದ ಬ್ಯಾಟ್ಸ್‌ ಮನ್ ಆಗಿದ್ದು, ಪ್ರಥಮ ದರ್ಜೆಯಲ್ಲಿ ದ್ವಿಶತಕ ಹಾಗೂ ಲಿಸ್ಟ್ ಎ ಕ್ರಿಕೆಟ್‌ ನಲ್ಲಿ ಶತಕ ಸಾಧನೆ ಮಾಡಿದ್ದಾರೆ. ಅಲ್ಲದೆ ಡಿಯೋಧರ್ ಟ್ರೋಫಿಯಲ್ಲಿ ಭಾರತ ಸಿ ತಂಡದ ಪರ ಆಡಿದ್ದರು. ಕಿರಿಯರ ವಿಶ್ವಕಪ್ 13ನೇ ಆವೃತ್ತಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದೆ. ಅಲ್ಲದೆ ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನು ಹೊಂದಿರಲಿದೆ.

ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡ ನ್ಯೂಜಿಲೆಂಡ್, ಶ್ರೀಲಂಕಾ ಹಾಗೂ ಜಪಾನ್ ಜತೆಗೆ ಎ ಗುಂಪಿನಲ್ಲಿದ್ದು, ಪ್ರತಿ ಗುಂಪಿನ ಎರಡು ತಂಡಗಳು ಸೂಪರ್ ಲೀಗ್ ಹಂತವನ್ನು ಪ್ರವೇಶಿಸಲಿದೆ. ಇದೇ ಮೊದಲ ಬಾರಿಗೆ ಜಪಾನ್ ವಿಶ್ವಕಪ್ ಆಡುವ ಅರ್ಹತೆಯನ್ನು ಪಡೆದಿದೆ.  

ವಿಶ್ವಕಪ್‌ಗೆ ಭಾರತ ಕಿರಿಯರ ತಂಡ ಇಂತಿದೆ:
ಪ್ರಿಯಂ ಗಾರ್ಗ್ (ನಾಯಕ), ಧ್ರುವ್ ಚಂದ್ ಜುರೆಲ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಾಕ್ ವರ್ಮಾ, ದಿವ್ಯಾಂಶ್ ಸಕ್ಸೆನಾ, ಶುಭಾಂಗ್ ಹೆಗ್ಡೆ, ರವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲಕರ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಸುಶಾಂತ್ ಮಿಶ್ರಾ ಮತ್ತು ವಿದ್ಯಾದರ್ ಪಾಟೀಲ್

SCROLL FOR NEXT