ಕ್ರಿಕೆಟ್

ಸಚಿನ್ ಗೆ ವಿರಾಟ್ ಕೊಹ್ಲಿ ಸರಿಸಮಾನ: ಅಬ್ದುಲ್ ರಜಾಕ್ ಅಭಿಪ್ರಾಯವೇನು ಗೊತ್ತೇ?

Srinivas Rao BV

ವಿರಾಟ್ ಕೋಹ್ಲಿ ಸಚಿನ್ ಗೆ ಸರಿ ಸಮನಾದ ಕ್ರಿಕೆಟಿಗರಾ? ಎಂಬ ಬಗ್ಗೆ ಪಾಕಿಸ್ತಾನ ಆಲ್ ರೌಂಡರ್ ಅಬ್ದುಲ್ ರಜಾಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕ್ರಿಕೆಟ್ ಪಾಕಿಸ್ತಾನದೊಂದಿಗೆ ಮಾತನಾಡಿರುವ ಅವರು, ಸಚಿನ್ ತೆಂಡೂಲ್ಕರ್ ಲೆಜೆಂಡ್ ಆಟಗಾರ, ಅವರ ಸರಿ ಸಮನಾದ ಆಟಗಾರನೆಂದು ವಿರಾಟ್ ಕೋಹ್ಲಿಯನ್ನು ನಾನು ಪರಿಗಣಿಸುವುದಿಲ್ಲ. 

1992-2007 ರ ಅವಧಿಯಲ್ಲಿ ಆಡುತ್ತಿದ್ದ ವಿಶ್ವದರ್ಜೆಯ ಆಟಗಾರರನ್ನು ನಾವು ಇಂದು ನೋಡುತ್ತಿಲ್ಲ. T20 ಕ್ರಿಕೆಟ್ ಆಟವನ್ನೇ ಬದಲಾವಣೆ ಮಾಡಿದೆ. ಬೌಲಿಂಗ್, ಬ್ಯಾಟಿಂಗ್, ಕ್ಷೇತ್ರ ರಕ್ಷಣೆಯಲ್ಲಿ ಗುಣಮಟ್ಟವಿಲ್ಲ. ಕ್ರಿಕೆಟ್ ಜಗತ್ತು ಈಗ ಕುಗ್ಗಿದೆ ಎಂದು ಹೇಳಿದ್ದಾರೆ. 

ವಿರಾಟ್ ಕೊಹ್ಲಿ ಆಡಿದರೆ ಚೆನ್ನಾಗಿ ಆಡುತ್ತಾರೆ. ಅವರಿಗೆ ಆತ ಓರ್ವ ಅತ್ಯುತ್ತಮ ಆಟಗಾರ, ಸ್ಥಿರ ಪ್ರದರ್ಶನವಿದೆ. ಆದರೆ ಅವರನ್ನು ಸಂಪೂರ್ಣವಾಗಿ ಬೇರೆಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಸ್ಥಾನಕ್ಕೆ ಸರಿಸಮಾನರು ಎಂದು ಹೇಳಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. 

ಇದೇ ವೇಳೆ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಪಾಕಿಸ್ತಾನ ಬೌಲರ್ ಗಳ ಆಯ್ಕೆ ಮಾನದಂಡದ ವಿಷಯವಾಗಿಯೂ ಅಸಮಾಧಾನ ವ್ಯಕ್ತಪಡಿಸಿರುವ ರಜಾಕ್, ನೆಟ್ ಪ್ರದರ್ಶನ ಉತ್ತಮವಾಗಿರುವವರನ್ನು ಆಯ್ಕೆ ಮಾಡಿದ್ದಾರೆ, ಇದೂ ಒಂದು ಮಾನದಂಡವೇ? ನೈಜ ಪಂದ್ಯದಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದು ತಿಳಿದಿರುವುದಿಲ್ಲ ಎಂದು ಹೇಳಿದ್ದಾರೆ. 
 

SCROLL FOR NEXT