ಕ್ರಿಕೆಟ್

ಭಾರತ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯಗಳನ್ನಾಡದಿರುವುದು ದುರಾದೃಷ್ಟ- ಪಾಕ್ ಆಟಗಾರ

Nagaraja AB

ಕರಾಚಿ: ಭಾರತ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯಗಳನ್ನಾಡದಿರುವುದು ದುರಾದೃಷ್ಟವಾಗಿದ್ದು, ಟೆಸ್ಟ್  ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯಂತಹ ಆಟಗಾರರ ಎದುರು ತನ್ನ ಕೌಶಲ್ಯ ಪ್ರದರ್ಶಿಸಲು ಉತ್ಸುಕತೆಯಿಂದ ಕಾಯುತ್ತಿರುವುದಾಗಿ  ಪಾಕಿಸ್ತಾನದ ಲೇಗ್ ಸ್ಪೀನ್ನರ್ ಯಾಸಿರ್ ಶಾ ಹೇಳಿದ್ದಾರೆ.

33 ವರ್ಷದ ಯಾಸಿರ್ ಶಾ 37 ಟೆಸ್ಟ್ ಪಂದ್ಯಗಳನ್ನಾಡಿದ್ದು, 207 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ. 2011ರಲ್ಲಿ ಚೊಚ್ಚಲ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದಾಗಿನಿಂದಲೂ ಈವರೆಗೂ ಭಾರತದ ವಿರುದ್ಧ ಒಂದು ಪಂದ್ಯದಲ್ಲಿಯೂ ಅವರು  ಆಡೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳ ಬಗ್ಗೆ ಒಲವು ಕಡಿಮೆ ಇದ್ದು, ಭಾರತದ ವಿರುದ್ಧ ಒಂದೇ ಒಂದು ಪಂದ್ಯಗಳನ್ನಾಡದಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ಟೀಂ ಇಂಡಿಯಾದಲ್ಲಿ ಉನ್ನತ ಆಟಗಾರರಿದ್ದು, ಕೊಹ್ಲಿಯಂತಹ ಶ್ರೇಷ್ಠ ಆಟಗಾರರ ಎದುರು ಆಡುವುದಕ್ಕೆ ಇಷ್ಟಪಡುವುದಾಗಿ ಅವರು ಹೇಳಿದ್ದಾರೆ.

2008ರಲ್ಲಿ ಮುಂಬೈ ದಾಳಿ ನಡೆದ  ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಟೆಸ್ಟ್ ಪಂದ್ಯ ನಡೆದಿಲ್ಲ.  ಭಾರತ ವಿರುದ್ಧ ಟೆಸ್ಟ್ ಪಂದ್ಯ ಆಡಲು ಅವಕಾಶ ಪಡೆಯುವುದನ್ನು ಪ್ರೀತಿಸುವುದಾಗಿ ಯಾಸಿರ್ ಶಾ ಹೇಳಿಕೊಂಡಿದ್ದಾರೆ.

SCROLL FOR NEXT