ಕ್ರಿಕೆಟ್

ಕಳಪೆ ಪ್ರದರ್ಶನವಿದ್ದರೂ ಇಂಗ್ಲೆಂಡ್'ಗೆ ಉತ್ತಮ ರ್ಯಾಂಕಿಂಗ್: ಐಸಿಸಿ ಟೆಸ್ಟ್ ಶ್ರೇಯಾಂಕದ ಬಗ್ಗೆ ಮೈಕಲ್‌ ವಾನ್ ಗರಂ!

Vishwanath S

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪ್ರಕಟಿಸಿರುವ ನೂತನ ಟೆಸ್ಟ್‌ ರ‍್ಯಾಂಕಿಂಗ್‌ ಪಟ್ಟಿಯ ವಿರುದ್ಧ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳ ಪ್ರದರ್ಶನ ಹೇಳಿಕೊಳ್ಳುವ ಮಟ್ಟದ್ದಾಗಿರದೇ ಇದ್ದರೂ ಕೂಡ ಕ್ರಮವಾಗಿ 2ನೇ ಮತ್ತು ನಾಲ್ಕನೇ ಸ್ಥಾನ ಪಡೆದಿರುವುದಾದರೂ ಹೇಗೆ? ಎಂದು ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ವ್ಯವಸ್ಥೆಯನ್ನು ವಾನ್‌ ಪ್ರಶ್ನಿಸಿದ್ದಾರೆ.

"ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ ವಿರುದ್ಧ ಅಸಮಾಧಾನವಿದೆ. ನನ್ನ ಪ್ರಕಾರ ಟೆಸ್ಟ್‌ ರ‍್ಯಾಂಕಿಂಗ್‌ ನಿಜಕ್ಕೂ ಕಸಕ್ಕೆ ಸಮಾನ. ಕಳೆದ ಎರಡು ವರ್ಷಗಳಲ್ಲಿ ನ್ಯೂಜಿಲೆಂಡ್‌ ತಂಡ ಹಲವು ಸರಣಿಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಆದರೆ, ಟೆಸ್ಟ್‌ನಲ್ಲಿ ಕಳೆದೆರಡು ವರ್ಷಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಇಂಗ್ಲೆಂಡ್‌ 3ನೇ ಮತ್ತು ನಾಲ್ಕನೇ ಸ್ಥಾನದಲ್ಲೇ ಉಳಿದಿರುವುದು ನಿಜಕ್ಕೂ ಅರ್ಥಹೀನ," ಎಂದು ವಾನ್‌ ಅಸಮಾಧಾನ ಹೊರಹಾಕಿದ್ದಾರೆ.

SCROLL FOR NEXT