ಅಖ್ತರ್ , ಡ್ಯಾನಿಶ್ ಕನೇರಿಯಾ 
ಕ್ರಿಕೆಟ್

ಹಿಂದೂವಾಗಿರುವ ಕಾರಣಕ್ಕೆ ಕನೇರಿಯಾರನ್ನು ಕೀಳಾಗಿ ಕಾಣುವ ಪಾಕಿಸ್ತಾನ ಕ್ರಿಕೆಟಿಗರು-ಅಖ್ತರ್

ಪಾಕಿಸ್ತಾನದ ಬೌಲರ್ ಡ್ಯಾನಿಶ್ ಕನೇರಿಯಾ ಹಿಂದೂವಾಗಿರುವ ಕಾರಣ ಅವರನ್ನು ಇತರ ಆಟಗಾರರು ಕೀಳಾಗಿ ಕಾಣುತ್ತಾರೆ. ಅವರೊಂದಿಗೆ ಊಟ ಕೂಡಾ ಮಾಡಲ್ಲ ಎಂದು ಮಾಜಿ ವೇಗಿ ಶೋಯಬ್ ಅಖ್ತರ್ ಆರೋಪಿಸಿದ್ದಾರೆ.

ಇಸ್ಲಾಮಾಬಾದ್ : ಪಾಕಿಸ್ತಾನದ ಬೌಲರ್ ಡ್ಯಾನಿಶ್ ಕನೇರಿಯಾ ಹಿಂದೂವಾಗಿರುವ ಕಾರಣ ಅವರನ್ನು ಇತರ ಆಟಗಾರರು ಕೀಳಾಗಿ ಕಾಣುತ್ತಾರೆ. ಅವರೊಂದಿಗೆ ಊಟ ಕೂಡಾ ಮಾಡಲ್ಲ ಎಂದು ಮಾಜಿ ವೇಗಿ ಶೋಯಬ್ ಅಖ್ತರ್ ಆರೋಪಿಸಿದ್ದಾರೆ.

ಅನಿಲ್ ದಳಪತ್ ನಂತರ ಡ್ಯಾನೀಶ್ ಕಾನೇರಿಯಾ ಪಾಕಿಸ್ತಾನ ತಂಡದಲ್ಲಿರುವ ಎರಡನೇ ಹಿಂದೂ ಕ್ರಿಕೆಟ್ ಆಟಗಾರರಾಗಿದ್ದಾರೆ. ಡ್ಯಾನಿಶ್ ಕನೇರಿಯಾ  34. 79 ಸರಾಸರಿಯಲ್ಲಿ  61 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್ ಪಡೆದಿದ್ದಾರೆ. ಅವರು 18 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಡ್ಯಾನೀಶ್ ಕಾನೇರಿಯಾ ಹಿಂದೂವಾಗಿರುವ ಕಾರಣ ಅವರ ಕಾರ್ಯಕ್ಷಮತೆಗೆ ಬೆಲೆ ಸಿಗುತ್ತಿಲ್ಲ, ಅವರಿಗೆ ತಾರತಮ್ಯ ಮಾಡಲಾಗುತ್ತದೆ ಎಂದು ಅಖ್ತರ್ ಪಿಟಿವಿ ಸ್ಫೋರ್ಟಿನ  ಶೋವೊಂದರಲ್ಲಿ ಹೇಳಿದ್ದಾರೆ. 

ಇಂತಹ ಕಡೆಗಳಲ್ಲಿ ಅವರು ಊಟ ಕೂಡಾ ಹೇಗೆ ಮಾಡುವುದಕ್ಕೆ ಆಗುತ್ತದೆ. ಇದೇ ಹಿಂದೂವಿನಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಪಾಕಿಸ್ತಾನ ಪರ ವಿಕೆಟ್ ಪಡೆಯುವ ಬಲ ಹೊಂದಿದ್ದರೆ ಕನೇರಿಯಾ ಆಡಬೇಕು. ಕನೇರಿಯಾ ಪ್ರಯತ್ನ ಇಲ್ಲದೆ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಆದ್ಯಾವ ಕ್ರೆಡಿಟ್ ಅವರಿಗೆ ಸಂದೇ ಇಲ್ಲ ಎಂದು ಅಖ್ತರ್ ತಿಳಿಸಿದ್ದಾರೆ. 

39 ವರ್ಷದ ಕನೇರಿಯಾ 2009ರಲ್ಲಿ  ಸ್ಪಾರ್ಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ಬಳಿಕ ಕ್ಷಮೆಯಾಚಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ