ಕ್ರಿಕೆಟ್

ಸಿಎಎ ವಿರುದ್ಧದ ಪ್ರತಿಭಟನೆಯಿಂದ 80 ಕೋಟಿ ರೂ. ಮೌಲ್ಯದಷ್ಟು ರೈಲ್ವೆ ಆಸ್ತಿ ಹಾನಿ!

Nagaraja AB

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ ಸುಮಾರು 80 ಕೋಟಿ ರೂ. ಮೌಲ್ಯದಷ್ಟು ರೈಲ್ವೆ ಆಸ್ತಿ ಹಾನಿಯಾಗಿದೆ ಎಂದು ಭಾರತೀಯ ರೈಲ್ವೆ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಯಿಂದಾಗಿ ರೈಲ್ವೆಗೆ ಸೇರಿದ 80 ಕೋಟಿ ರೂ. ಮೌಲ್ಯದಷ್ಟು ಆಸ್ತಿ ಹಾನಿಯಾಗಿದೆ. ಹಿಂಸಾಚಾರ ಹಾಗೂ ಅಗ್ನಿಸ್ಪರ್ಶದಲ್ಲಿ ತೊಡಗಿದವರನ್ನು ಪತ್ತೆ ಹಚ್ಟಿ ಅವರಿಂದ ವಸೂಲಿ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ದೇಶಾದ್ಯಂತ ಎನ್ ಆರ್ ಸಿ ವಿಸ್ತರಣೆ ವಿರೋಧಿಸಿ ದೇಶದ ಉದ್ದಗಲಕ್ಕೂ ಪ್ರತಿಭಟನೆ ನಡೆದು ಹಿಂಸಾಚಾರವನ್ನು ತಡೆಯಲು ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು.

SCROLL FOR NEXT