ಕ್ರಿಕೆಟ್

ಮಕ್ಕಳ ಭವಿಷ್ಯಕ್ಕಾಗಿ ಮುಂದಿನ ದಶಕ ಮೀಸಲು: ಸಚಿನ್ ತೆಂಡೂಲ್ಕರ್ 

Raghavendra Adiga

ಮುಂಬೈ: ಎರಡು ದಶಕಗಳಿಗಿಂತ ಹೆಚ್ಚು  ಅವಧಿ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕಳೆದಿದ್ದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಮುಂದಿನ ದಶಕವನ್ನು ತನ್ನ ಮಕ್ಕಳ ಹಾಗೂ ಅವರ ಭವಿಷ್ಯಕ್ಕೆೆ ಮೀಸಲಿಡಲಾಗುವುದು ಎಂದು ತಿಳಿಸಿದ್ದಾರೆ.

2019ರ ವರ್ಷದ ಕೊನೆಯ ದಿನವಾದ ಮಂಗಳವಾರ ಹಲವರು ಪ್ರಸಕ್ತ ಕಹಿ ಹಾಗೂ ಸಿಹಿ ಘಟನೆಗಳನ್ನು ಮೆಲುಕು ಹಾಕುವ ಜತೆಗೆ ಮುಂದಿನ ವರ್ಷ ಹಾಗೂ ದಶಕದಲ್ಲಿ ತಮ್ಮ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಇದೀಗ, ಅದೇ ಹಾದಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಮುಂದಿನ ದಶಕದ ಯೋಜನೆಯನ್ನು ಬಹಿರಂಗ ಪಡಿಸಿದ್ದಾರೆ.

‘‘ನಾಳೆಯಿಂದ 2020ರ ವರ್ಷ ಆರಂಭವಾಗುತ್ತಿದ್ದು, ಈ ದಶಕದಲ್ಲಿ ತಮ್ಮ ಮಕ್ಕಳ ಹಾಗೂ ಅವರ ಭವಿಷ್ಯದಲ್ಲಿ ಭಾಗಿಯಾಗುತ್ತಿದ್ದೇನೆ. ಅವರ ತಪ್ಪುಗಳನ್ನು ತಿದ್ದಿ , ಪ್ರೀತಿಯನ್ನು ಹಂಚುವ ಮೂಲಕ ಅವರು ದೊಡ್ಡ ಕನಸು ಕಾಣುವಂತೆ ಶಕ್ತಗೊಳಿಸಲಾಗುವುದು. ಅವರ ಆರೋಗ್ಯ, ಪೋಷಣೆ ಮತ್ತು ಶಿಕ್ಷಣದಲ್ಲಿ ಸರಿಯಾಗಿ ಹೂಡಿಕೆ ಮಾಡುವ ಮೂಲಕ ಅವರ ಕನಸುಗಳನ್ನು ಸಾಧಿಸಲು ನಾವು ಅವರಿಗೆ ಶಕ್ತಿ ತುಂಬಬೇಕು,’’ ಎಂದು ಹೇಳಿದ್ದಾರೆ.

‘‘ಕ್ರೀಡೆ ನಮ್ಮ ಮಕ್ಕಳನ್ನು ಸಕ್ರಿಯವಾಗಿ ಮತ್ತು ಆರೋಗ್ಯವಾಗಿರಿಸುವುದಲ್ಲದೆ, ಅವರು ತಂಡದ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ನೆರವಾಗುತ್ತದೆ. ಜೆತೆಗ, ಪರಸ್ಪರ ಸಂಬಂಧಗಳ ಬಗ್ಗೆೆ ಅವರಿಗೆ ತಿಳಿಸಲಿದೆ. ಎಲ್ಲಾ ಮಕ್ಕಳು ಎಲ್ಲಾ ಹಂತಗಳಲ್ಲಿ ಸಮಾನ ಅವಕಾಶಗಳನ್ನು ಪಡೆಯಬೇಕು ಮತ್ತು ತಾರತಮ್ಯ ಮಾಡಬಾರದು,’’ ಎಂದು ಅವರು ಉಲ್ಲೇಖಿಸಿದರು.

SCROLL FOR NEXT