ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ತಂಡದ ನಾಯಕ ರೋಹಿತ್ ಶರ್ಮಾ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ನ್ಯೂಜಿಲ್ಯಾಂಡ್ ತಂಡದ ಆಟಗಾರ ಮಾರ್ಟಿನ್ ಗುಪ್ಟಿಲ್ ಅವರ ವಿಶ್ವ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ. ಸದ್ಯ ರೋಹಿತ್ ಶರ್ಮಾ 2288 ರನ್ ಪೇರಿಸುವ ಮೂಲಕ ಅಗ್ರ ಆಟಗಾರನಾಗಿದ್ದಾರೆ.
* ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸುವವ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ. ಕ್ರಿಸ್ ಗೇಯ್ಲ್ ಹಾಗೂ ಮಾರ್ಟಿನ್ ಗುಪ್ಟಿಲ್ ಇಬ್ಬುರ 103 ಸಿಕ್ಸ್ ಬಾರಿಸಿದ್ದರೆ ರೋಹಿತ್ ಶರ್ಮಾ 102 ಸಿಕ್ಸರ್ ಬಾರಿಸಿದ್ದಾರೆ.
* ಜಗತ್ತಿನಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಶತಕ ಸಿಕ್ಸರ್ ಬಾರಿಸಿರುವ ಮೂರನೇ ಆಟಗಾರ ರೋಹಿತ್ ಶರ್ಮಾ.
* ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿರುವವರ ಪಟ್ಟಿಯಲ್ಲಿ ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ(349 ಸಿಕ್ಸರ್), ಶಾಯೀದ್ ಅಫ್ರಿದಿ ಮತ್ತು ಕ್ರಿಸ್ ಗೇಯ್ಲ್(476 ಸಿಕ್ಸರ್), ಬ್ರೆಂಡನ್ ಮೆಕಲಮ್(398) ಮತ್ತು ಸನತ್ ಜಯಸೂರ್ಯ(352) ಸಿಕ್ಸರ್ ಬಾರಿಸಿದ್ದಾರೆ.
* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ 20ಕ್ಕೂ ಹೆಚ್ಚು ಬಾರಿ ಅರ್ಧ ಶತಕ ಸಿಡಿಸಿರುವ ಆಟಗಾರ. ವಿರಾಟ್ ಕೊಹ್ಲಿ 19 ಬಾರಿ ಅರ್ಧ ಶತಕ ಸಿಡಿಸಿದ್ದಾರೆ.
* ಅಂತಾರಾಷ್ಟ್ರೀಯ ಮೂರು ಕ್ರಿಕೆಟ್ ಮಾದರಿಗಳಲ್ಲಿಯೂ ಸೇರಿ ರೋಹಿತ್ ಶರ್ಮಾ ಒಟ್ಟಾರೆ 349 ಸಿಕ್ಸರ್ ಬಾರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics