ಕ್ರಿಕೆಟ್

ವಿಶ್ವಕಪ್ : ಭಾರತ- ಪಾಕ್ ನಡುವಿನ ಪಂದ್ಯವನ್ನು ರದ್ದುಪಡಿಸಿ- ಬಿಸಿಸಿಐಗೆ ಸಿಸಿಐ ಕಾರ್ಯದರ್ಶಿ

Nagaraja AB

ಮುಂಬೈ: ಪುಲ್ವಾಮಾ ಅಮಾನುಷ ದಾಳಿ ಹಿನ್ನೆಲೆಯಲ್ಲಿ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ  ಭಾರತ- ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಿ ಎಂದು  ಭಾರತೀಯ ಕ್ರಿಕೆಟ್ ಕ್ಲಬ್  ಕಾರ್ಯದರ್ಶಿ ಸುರೇಶ್ ಬಾಪ್ನಾ ಬಿಸಿಸಿಐಗೆ ಹೇಳಿದ್ದಾರೆ.

ಕಾಶ್ಮೀರ ದಾಳಿ ಬಗ್ಗೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಎಲ್ಲಿಯೂ ಮುಕ್ತವಾಗಿ ಮಾತನಾಡಿಲ್ಲ. ಇದು ಅವರಲ್ಲಿನ ದೋಷವನ್ನು ತೋರಿಸುತ್ತದೆ. ನಮ್ಮ ಸೇನೆ ಹಾಗೂ ಸಿಆರ್ ಪಿಎಫ್ ಯೋಧರ ವಿರುದ್ಧದ ಭಯೋತ್ಪಾದನಾ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಕ್ರೀಡೆಗಿಂತಲೂ ನಮ್ಮಗೆ ದೇಶವೇ ಪ್ರಮುಖವಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಇಮ್ರಾನ್ ಖಾನ್ ಪ್ರತಿಕ್ರಿಯಿಸಬೇಕು. ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇಲ್ಲ ಅನ್ನುವುದಾದರೆ ಏಕೆ ಅವರು ಮುಕ್ತವಾಗಿ ಮಾತನಾಡುತ್ತಿಲ್ಲ. ಅವರು ಮುಕ್ತವಾಗಿ ಮಾತನಾಡಲಿ, ಜನರು ಸತ್ಯವನ್ನು ತಿಳಿಯಲಿ, ಮುಕ್ತವಾಗಿ ಮಾತನಾಡುತ್ತಿಲ್ಲ ಅಂದರೆ ಅವರು ಕೂಡಾ ಈ ಕೃತ್ಯದಲ್ಲಿ ಕೈ ಜೋಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಸುರೇಶ್ ತಿಳಿಸಿದರು.

SCROLL FOR NEXT