ಕ್ರಿಕೆಟ್

ವಿಶ್ವಕಪ್ ನಂತರ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರೀಸ್ ಗೇಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ!

Nagaraja AB

ಬಾರ್ಬುಡಾ: ಇಂಗ್ಲೆಂಡ್  ಹಾಗೂ ವೆಲ್ಸ್ ನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯ ನಂತರ ವೆಸ್ಟ್ ಇಂಡೀಸ್ ಹಿರಿಯ ಆಟಗಾರ ಕ್ರೀಸ್ ಗೇಲ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಲಿದ್ದಾರೆ ಎಂದು ವೆಸ್ಟ್ ಇಡೀಸ್ ಕ್ರಿಕೆಟ್ ಭಾನುವಾರ ಪ್ರಕಟಿಸಿದೆ.

ಹೊಡಿ ಬಡಿ ಆಟಕ್ಕೆ ಹೆಸರಾಗಿರುವ 39 ವರ್ಷದ ಆರಂಭಿಕ ಆಟಗಾರ ಕ್ರೀಸ್ ಗೇಲ್  284 ಏಕದಿನ ಮಾದರಿಯ ಪಂದ್ಯಗಳಲ್ಲಿ ಒಟ್ಟಾರೇ 9 ಸಾವಿರದ 727 ರನ್ ಕಲೆ ಹಾಕಿದ್ದಾರೆ.

ಏಕದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಸರ್ವಕಾಲಿಕ ದಾಖಲೆಯಾಗಿ ಉಳಿದಿರುವ  ಬ್ರಿಯಾನ್ ಲಾರಾ ಅವರನ್ನು ಸರಿಗಟ್ಟಲು  ಗೇಲ್ ಅವರಿಗೆ 677 ಕ್ಕೂ ಹೆಚ್ಚು ರನ್ ಗಳ ಅಗತ್ಯವಿದೆ. ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ಈ ಸಾಧನೆಯನ್ನು ಮಾಡುವ ವಿಶ್ವಾಸದಲ್ಲಿ ಗೇಲ್ ಇದ್ದಾರೆ.

2014ರಲ್ಲಿ ಆಡಿದ ಪಂದ್ಯವೇ ಗೇಲ್ ಅವರ ಕೊನೆಯ ಟೆಸ್ಟ್ ಪಂದ್ಯವಾಗಿದ್ದು, ಟಿ-20 ಕ್ರಿಕೆಟ್ ಮಾದರಿಯ ಪಂದ್ಯಗಳಲ್ಲಿ ಕ್ರೀಸ್ ಗೇಲ್ ಹೆಚ್ಚಿನ ಖ್ಯಾತಿ ಹೊಂದಿದ್ದಾರೆ.

1999ರಲ್ಲಿ ಚೊಚ್ಚಲ ಬಾರಿಗೆ ಕ್ರಿಕೆಟ್ ಪಂದ್ಯವನ್ನಾಡಿದ ಕ್ರೀಸ್ ಗೇಲ್,  ನಾಲ್ಕು ವರ್ಷಗಳ ಹಿಂದೆ ಜಿಂಬಾಬ್ವೆ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮೊದಲ ಬಾರಿಗೆ ದ್ವಿಶತಕ ಸೇರಿದಂತೆ  ಏಕದಿನ ಪಂದ್ಯಗಳಲ್ಲಿ 23 ಶತಕ ಗಳಿಸಿದ್ದಾರೆ. ಇದು ವೆಸ್ಟ್ ಇಂಡೀಸ್  ಕ್ರಿಕೆಟ್ ನಲ್ಲಿ ದಾಖಲೆಯ ಸ್ಕೂರ್  ಆಗಿದೆ.

SCROLL FOR NEXT