ಸಂಗ್ರಹ ಚಿತ್ರ 
ಕ್ರಿಕೆಟ್

ಅಪರೂಪದ ದಾಖಲೆ: ಬರೋಬ್ಬರಿ 2 ವರ್ಷಗಳ ಬಳಿಕ ಲೈನ್ ನೋ-ಬಾಲ್ ಎಸೆದ ಇಂಗ್ಲೆಂಡ್ ಬೌಲರ್

ಇಂಗ್ಲೆಂಡ್ ತಂಡದ ಬೌಲರ್ ವೊಬ್ಬರು ಬರೊಬ್ಬರಿ 2 ವರ್ಷಗಳ ಬಳಿಕ ಮೊದಲ ಲೈನ್ ನೋಬಾಲ್ ಎಸೆದು ಅಪರೂಪದ ದಾಖಲೆ ಬರೆದಿದ್ದಾರೆ.

ಓವಲ್: ಇಂಗ್ಲೆಂಡ್ ತಂಡದ ಬೌಲರ್ ವೊಬ್ಬರು ಬರೊಬ್ಬರಿ 2 ವರ್ಷಗಳ ಬಳಿಕ ಮೊದಲ ಲೈನ್ ನೋಬಾಲ್ ಎಸೆದು ಅಪರೂಪದ ದಾಖಲೆ ಬರೆದಿದ್ದಾರೆ.
ಹೌದು.. ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಬೆನ್ ಸ್ಟೋಕ್ಸ್, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಲೈನ್ ನೋ ಬಾಲ್ ಎಸೆದಿದ್ದು, ಈ ಮೂಲಕ ಬೇಡವಾದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 
ಏಕದಿನ ಕ್ರಿಕೆಟ್ ಮಾದರಿಯಲ್ಲಿ 2 ವರ್ಷಗಳ ಬಳಿಕ ಇಂಗ್ಲೆಂಡ್ ಪರ ಸ್ಟೋಕ್ಸ್ ಲೈನ್ ನೋ ಬಾಲ್ ಎಸೆದಿದ್ದಾರೆ. ಪಂದ್ಯದ 48ನೇ ಓವರ್ ಬೌಲ್ ಮಾಡಿದ ಸ್ಟೋಕ್ಸ್ ನೋ ಬಾಲ್ ಎಸೆದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ಹೆಟ್ಮರ್ ನೋ ಬಾಲ್ ಎಸೆತದಲ್ಲಿ ಒಂದು ರನ್ ಮಾತ್ರ ಪಡೆದರು. ಈ ಹಿಂದೆ 2017 ಜನವರಿಯಲ್ಲಿ ಇಂಗ್ಲೆಂಡ್ ತಂಡದ ಲಿಯಾಮ್ ಪ್ಲಾಂಕೆಟ್ ಲೈನ್ ನೋ ಬಾಲ್ ಎಸೆದಿದ್ದರು.
ಕಳೆದ 2 ವರ್ಷಗಳ ಅವಧಿಯಲ್ಲಿ ಇಂಗ್ಲೆಂಡ್ ಬೌಲರ್ ಗಳು 11 ಸಾವಿರಕ್ಕೂ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ್ದಾರೆ. ಆದರೆ ಈ ಅವಧಿಯಲ್ಲಿ ಯಾವುದೇ ಲೈನ್ ನೋ ಬಾಲ್ ಆಗಿರಲಿಲ್ಲ.  ನೋ ಬಾಲ್ ಬಳಿಕ ಫ್ರೀ ಹಿಟ್ ಅವಕಾಶ ಪಡೆದ ನರ್ಸ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗಿ, 1 ರನ್ ಮಾತ್ರ ಗಳಿಸಲು ಯಶಸ್ವಿಯಾದರು. ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ನಲ್ಲಿ 13 ರನ್ ಹೆಚ್ಚುವರಿಯಾಗಿ ನೀಡಿತ್ತು. ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ವಿಂಡೀಸ್ 289 ರನ್ ಗಳಿಸಿದರೆ. ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 263 ರನ್ ಗಳಿಗೆ ಅಲೌಟ್ ಆಯ್ತು. ಪರಿಣಾಮ ವಿಂಡೀಸ್ 26 ರನ್ ಗಳ ಅಂತರ ಜಯ ಪಡೆದು 5 ಪಂದ್ಯಗಳ ಟೂರ್ನಿಯಲ್ಲಿ 1-1ರ ಅಂತರದಲ್ಲಿ ಸಮಬಲ ಸಾಧಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT