ಇತಿಹಾಸ ನಿರ್ಮಿಸಿದ ಜಾರ್ಖಂಡ್ ಕ್ರಿಕೆಟಿಗ ಇಶಾನ್, ಭಾರತದಲ್ಲಿ ಆ ಸಾಧನೆ ಮಾಡಿರುವುದು ಇಬ್ಬರೇ ಕ್ರಿಕೆಟಿಗರು! 
ಕ್ರಿಕೆಟ್

ಇತಿಹಾಸ ನಿರ್ಮಿಸಿದ ಜಾರ್ಖಂಡ್ ಕ್ರಿಕೆಟಿಗ ಇಶಾನ್, ಭಾರತದಲ್ಲಿ ಆ ಸಾಧನೆ ಮಾಡಿರುವುದು ಇಬ್ಬರೇ ಕ್ರಿಕೆಟಿಗರು!

ಜಾರ್ಖಂಡ್ ನ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇಶಾನ್ ಕಿಶನ್ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. 20 ವರ್ಷದ ಇಶಾನ್ ಕಿಶನ್, ದೇಶಿ ಕ್ರಿಕೆಟ್ ನಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ವಿಜಯವಾಡ: ಜಾರ್ಖಂಡ್ ನ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಇಶಾನ್ ಕಿಶನ್ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. 20 ವರ್ಷದ ಇಶಾನ್ ಕಿಶನ್, ದೇಶಿ ಕ್ರಿಕೆಟ್ ನಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. 
ವಿಜಯವಾಡದಲ್ಲಿ ನಡೆದ ಮಣಿಪುರ ವಿರುದ್ಧದ ಟಿ-20 ಪಂದ್ಯದಲ್ಲಿ 62 ಎಸೆತಗಳಲ್ಲಿ 113 ರನ್ ಗಳನ್ನು ದಾಖಲಿಸುವ ಮೂಲಕ ಇಶಾನ್ ಸತತ 2 ನೇ ಬಾರಿಗೆ ಶತಕ ದಾಖಲಿಸಿದ್ದಾರೆ. ಈ ರೀತಿ ಟಿ-20 ಪಂದ್ಯದಲ್ಲಿ ಸತತ 2 ನೇ ಬಾರಿಗೆ ಶತಕ ದಾಖಲಿಸಿರುವ ಭಾರತದ 2 ನೇ ಆಟಗಾರ ಎಂಬ ದಾಖಲೆ ಈಗ ಇಶಾನ್ ಹೆಸರಿನಲ್ಲಿದೆ.  ಇದಕ್ಕೂ ಮುನ್ನ ಭಾರತದ ಉನ್ಮುಕ್ತ್ ಚಂದ್ ಟಿ-20 ಸತತ 2 ಶತಕಗಳನ್ನು ದಾಖಲಿಸಿದ್ದರು. ಇನ್ನು ಮಣಿಪುರಕ್ಕೆ 219 ರನ್ ಟಾರ್ಗೆಟ್ ನೀಡಿದ್ದ ಜಾರ್ಖಂಡ್ ತಂಡ ಎದುರಾಳಿ ತಂಡವನ್ನು 98 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು 122 ರನ್ ಗಳ ಬೃಹತ್ ಮೊತ್ತದ ಗೆಲುವನ್ನು ದಾಖಲಿಸಿದೆ. 
ಜಮ್ಮು-ಕಾಶ್ಮೀರದ ವಿರುದ್ಧ ನಡೆದ ಪಂದ್ಯದಲ್ಲಿ ಇಶಾನ್ 55 ಎಸೆತಗಳಲ್ಲಿ 100 ರನ್ ಗಳಿಸಿ ಮೊದಲ ಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿಯೂ ಜಾರ್ಖಂಡ್ 9 ವಿಕೆಟ್ ಗಳ ಭರ್ಜರಿ ಜಯ ಗಳಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!