ಉಸ್ಮಾನ್ ಖವಾಜ-ಸೌರವ್ ಗಂಗೂಲಿ
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಮನ್ನಡೆ ಸಾಧಿಸಿದೆ. ಇನ್ನು ಆಸೀಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ತಂಡಕ್ಕೆ ಆಸರೆಯಾಗುತ್ತಿರುವ ಉಸ್ಮಾನ್ ಖವಾಜರನ್ನು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕಾಲೆಳೆದಿದ್ದಾರೆ.
ಉಸ್ಮಾನ್ ಖವಾಜ ಮಲಗಿ ಸುಖವಾಗಿ ನಿದ್ರಿಸುತ್ತಿದ್ದರು ಆತನ ಕನಸಿನಲ್ಲಿ ರವೀಂದ್ರ ಜಡೇಜಾ ಹಾಗೂ ಆ ಅಶ್ವಿನ್ ಬಂದು ಆತನ್ನು ಔಟ್ ಮಾಡುತ್ತಾರೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜ ಮೂರು ಪಂದ್ಯಗಳ ಪೈಕಿ ಆರು ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಅದರಲ್ಲಿ ಮೂರು ಬಾರಿ ಭಾರತೀಯ ಸ್ಪಿನ್ನರ್ ಗಳ ದಾಳಿಗೆ ಬಲಿಯಾಗಿದ್ದಾರೆ. ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಅಶ್ವಿನ್ ಖವಾಜರ ವಿಕೆಟ್ ಕಿತ್ತಿದ್ದರು. ಇನ್ನು ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ ಖವಾಜರನ್ನು ಔಟ್ ಮಾಡಿದ್ದರು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಮೂರು ಟೆಸ್ಟ್ ಪಂದ್ಯಗಳಿಂದ ಉಸ್ಮಾನ್ ಖವಾಜ 167 ರನ್ ಸಿಡಿಸಿದ್ದಾರೆ. ಆದರೆ ಆತನ ಸಹ ಆಟಗಾರರು ಉತ್ತಮ ರನ್ ಪೇರಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.