ಕ್ರಿಕೆಟ್

4ನೇ ಟೆಸ್ಟ್, 1ನೇ ದಿನ: ಪೂಜಾರ ಶತಕ, ಮಾಯಾಂಕ್ ಅರ್ಧ ಶತಕ, ಟೀಂ ಇಂಡಿಯಾ 303/4

Vishwanath S
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 303 ರನ್ ಪೇರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಂ ಇಂಡಿಯಾಗೆ ಕನ್ನಡಿಕ ಮಾಯಾಂಕ್ ಅಗರವಾಲ್ ಮತ್ತು ಚೇತೇಶ್ವರ ಪೂಜಾರ ಭದ್ರ ಬುನಾದಿ ಹಾಕಿಕೊಟ್ಟರು. ಪರಿಣಾಮ ಮೊದಲ ದಿನದಲ್ಲಿ ಟೀಂ ಇಂಡಿಯಾ 303 ರನ್ ಗಳಿಸಿದೆ. 
ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಎಂದಿನಂತೆ ತಮ್ಮ ಕಳಪೆ ಆಟ ಪ್ರದರ್ಶಿಸಿ 9 ರನ್ ಗಳಿಗೆ ಔಟ್ ಆದರು. ಈ ವೇಳೆ ಮಾಯಾಂಕ್ ಅಗರವಾಲ್ ಮತ್ತು ಚೇತೇಶ್ವರ ಪೂಜಾರ ಉತ್ತಮ ಜೊತೆಯಾಟ ನೀಡಿ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು. ಮಾಯಾಂಕ್ 77 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ವಿರಾಟ್ ಕೊಹ್ಲಿ ಸಹ ನಿರಾಸೆ ಮೂಡಿಸಿ 23 ರನ್ ಗಳಿಸಿ ಔಟಾದರು.
ಕೊಹ್ಲಿ ಬಳಿಕ ಬಂದ ಉಪನಾಯಕ ಅಜಿಂಕ್ಯ ರಹಾನೆ ಸಹ 18 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ಮಧ್ಯೆ ಯುವ ಆಟಗಾರ ಹನುಮಂತ ವಿರಾಹಿ ಸ್ಫೋಟಕ ಬ್ಯಾಟಿಂಗ್ ಮಾಡಿ ಅಜೇಯ 39 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇನ್ನು 130 ರನ್ ಗಳಿಸಿರುವ ಪೂಜಾರ ಎರಡನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ.
ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಹೇಜಲ್ವುಡ್ 2, ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ತಲಾ 1 ವಿಕೆಟ್ ಪಡೆದಿದ್ದಾರೆ.
SCROLL FOR NEXT