ಕ್ರಿಕೆಟ್

ಚೇತೇಶ್ವರ ಪೂಜಾರ ಬ್ಯಾಟಿಂಗ್ ಕೌಶಲ್ಯಕ್ಕೆ ಮಾಯಾಂಕ್ ಅಗರ್ ವಾಲ್ ಪ್ರಶಂಸೆ!

Nagaraja AB

ಸಿಡ್ನಿ:ಟೀಂ ಇಂಡಿಯಾ  ಬಲಗೈ ಆಟಗಾರ ಚೇತೇಶ್ವರ್ ಪೂಜಾರ್ ಆಟದ ಕೌಶಲ್ಯದ ಬಗ್ಗೆ ಓಪನರ್ ಮಾಯಾಂಕ್ ಅಗರ್ ವಾಲ್    ಹಾಡಿ ಹೊಗಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ್ ಅವರ ಜೊತೆಗಿನ ಬ್ಯಾಟಿಂಗ್ ನಿಂದ ಸಾಕಷ್ಟು ನೆರವಾಗಿದೆ ಎಂದು ಅವರು ಹೇಳಿದ್ದಾರೆ.

ಆರಂಭಿಕ ಆಟಗಾರ ಕೆ. ಎಲ್. ರಾಹುಲ್  ಔಟಾದ ಬಳಿಕ ಪೂಜಾರ ಹಾಗೂ ಮಾಯಾಂಕ್ ಅಗರ್ ವಾಲ್ ಜೊತೆಯಾಟದಲ್ಲಿ   116 ರನ್ ಸಂಗ್ರಹಿಸುವ ಮೂಲಕ ಟೀಂ ಇಂಡಿಯಾ ಸುಭದ್ರವಾಗಿದೆ.

ದಿನದಾಟ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಗರ್ ವಾಲ್,  ಚೇತೇಶ್ವರ್ ಪೂಜಾರ ಅವರೊಂದಿಗೆ ಆಟವಾಡುವುದೇ  ಅದ್ಬುತ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮೂಲಕ ಆಟವಾಡುತ್ತಾರೆ. ರಕ್ಷಣಾತ್ಮಕ ಜೊತೆಗೆ ಅಗತ್ಯವಾದ  ಅಂಶಗಳ ಬಗ್ಗೆ ಮಾತನಾಡುತ್ತಾರೆ. ಎದುರಾಳಿಗಳು ಏನು ಮಾಡಬಹುದು ಎಂಬುದುರ ಬಗ್ಗೆ ಮಾತನಾಡುತ್ತಾರೆ.  ಬ್ಯಾಟಿಂಗ್ ನಡುವೆಯೇ ಮಾತನಾಡುತ್ತೇವೆ . ಇದರಿಂದ  ಸಾಕಷ್ಟು ನೆರವಾಗುತ್ತದೆ ಎಂದು ಹೇಳಿದರು.

ಮೊದಲ ದಿನ ಟೀಂ ಇಂಡಿಯಾ ಪ್ರದರ್ಶನ ಉತ್ತಮವಾಗಿದೆ. ಉಳಿದ ದಿನಗಳ ಪ್ರದರ್ಶನ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ.  ದಿನದಾಟ ಮುಕ್ತಾಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿರುವುದರಿಂದ ಸಂತೋಷದಲ್ಲಿದ್ದೇವೆ ಎಂದು ಮಾಯಾಂಕ್ ಅಗರ್ ವಾಲ್ ತಿಳಿಸಿದರು.

SCROLL FOR NEXT