ಕ್ರಿಕೆಟ್

ಬ್ಯಾಕ್ ಟು ಬ್ಯಾಕ್ 50: ಆಸ್ಟ್ರೇಲಿಯಾದಲ್ಲಿ ಕರ್ನಾಟಕದ ಮಾಯಾಂಕ್ ಕಮಾಲ್, ಗವಾಸ್ಕರ್, ಪೃಥ್ವಿ ದಾಖಲೆ ಧೂಳಿಪಟ!

Vishwanath S
ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೂ ಕನ್ನಡಿಗ ಮಾಯಾಂಕ್ ಅಗರವಾಲ್ ಭರ್ಜರಿ ಅರ್ಧ ಶತಕ ಸಿಡಿಸಿದ್ದು ಬ್ಯಾಕ್ ಟು ಬ್ಯಾಕ್ 50 ಮೂಲಕ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. 
ಎರಡನೇ ಟೆಸ್ಟ್ ಪಂದ್ಯದಲ್ಲಿ 77 ರನ್ ಗಳಿಸಿರುವ ಮಾಯಾಂಕ್ ಆಸೀಸ್ ನೆಲದಲ್ಲಿ ಎರಡು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಭಾರತದ ಎಂಟನೇ ಆರಂಭಿಕ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. 
ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಮೊದಲ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಮಾಯಾಂಕ್ 76 ರನ್ ಗಳಿಸಿದ್ದರು. ನಂತರ ದ್ವಿತೀಯ ಇನ್ನಿಂಗ್ಸ್ ನಲ್ಲಿ 42 ರನ್ ಬಾರಿಸಿದ್ದರು. ಇದೀಗ ತನ್ನ ಮೂರನೇ ಇನ್ನಿಂಗ್ಸ್ ನಲ್ಲಿ 77 ರನ್ ಬಾರಿಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.
SCROLL FOR NEXT