ಕ್ರಿಕೆಟ್

ಸಿಡ್ನಿ: ಭಾರತ ವಿರುದ್ಧ ಮೊದಲ ಏಕದಿನ ಪಂದ್ಯ: ಆಸೀಸ್ ಮೊದಲು ಬ್ಯಾಟಿಂಗ್

Nagaraja AB

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಟೀಂ ಇಂಡಿಯಾ ಬೌಲಿಂಗ್ ಮಾಡುತ್ತಿದೆ.

ಮೊದಲು ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾ  30 ಓವರ್ ಗಳಲ್ಲಿ  3 ವಿಕೆಟ್ ಗಳ ನಷ್ಟಕ್ಕೆ  138 ರನ್  ಕಲೆಹಾಕಿತ್ತು.  ಯೂಟಿ ಕಾವಾಜ ಅವರನ್ನು ಜಡೇಜಾ ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು.

ಯಾವಾಗಲೂ ಉತ್ತಮ ರೀತಿಯಲ್ಲಿ ಆಡಲು ಬಯಸುತ್ತೇವೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲೂ ಉತ್ತಮ ಪ್ರದರ್ಶನದ ಅಗತ್ಯವಿದೆ. 350 ರಿಂದ 370 ರನ್ ಗಳಿಸಲು ಪ್ರಯತ್ನಿಸುತ್ತೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಟೀಂ ಇಂಡಿಯಾ ಇಂತಿದೆ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಂಬಾಟಿ ರಾಯುಡು. ದಿನೇಶ್ ಕಾರ್ತಿಕ್, ಎಂಎಸ್ ದೋನಿ, ರವೀಂದ್ರ ಜಡೇಜಾ,  ಕುಲದೀಪ್ ಯಾದವ್,  ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್

ಆಸ್ಟ್ರೇಲಿಯಾ ತಂಡ: ಅಲೆಕ್ಸ್ ಕ್ಯಾರೆ, ಎಸ್ , ಮಾರ್ಸ್,  ಉಸ್ಮಾನ್ ಕಾವಾಜ, ಪೀಟರ್ ಹ್ಯಾಂಡ್ಸ್ ಕಾಂಬ್,  ಎಂ. ಸ್ಟೊಯ್ನಿಸ್, ಜಿ. ಮ್ಯಾಕ್ಸ್ ವೆಲ್,  ಜೆ, ರಿಚರ್ಡ್ ಸನ್, ನಾಥನ್ ಲೈಯಾನ್,  ಪೀಟರ್  ಸಿಡ್ಲ್  ಇದ್ದಾರೆ.
ಆಸ್ಟ್ರೇಲಿಯಾ ತವರಿನಲ್ಲೇ ಟೆಸ್ಟ್ ಸರಣಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಏಕದಿನ ಸರಣಿಯಲ್ಲೂ ಗೆಲ್ಲುವ ಭರವಸೆಯಲ್ಲಿದೆ.
SCROLL FOR NEXT