ಮುಂಬೈ: ಭಾರತದ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ತಾವು ಪ್ರಖ್ಯಾತ ಚಾಟ್ ಶೋ "ಕಾಫಿ ವಿತ್ ಕರಣ್" ನಲ್ಲಿ ಮಹಿಳೆಯರ ಬಗ್ಗೆ ಆಸಭ್ಯವಾಗಿ ಹೇಳಿಕೆ ನೀಡಿದ್ದಕ್ಕಾಗಿ ಮುಂಬೈನ ಖಾರ್ ಜಿಮ್ ಖಾನಾ ಸಂಸ್ಥೆಯ ಗೌರವ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.
ಪಾಂಡ್ಯ ಅವರ ಸದಸ್ಯತ್ವ ಹಿಂಪಡೆಯುವ ನಿರ್ಧಾರವನ್ನು ಸೋಮವಾರ ನಡೆದ ಜಿಮ್ ನ ವ್ಯವಸ್ಥಾಪಕರ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಖಾರ್ ಜಿಮ್ ಖಾನಾದ ಜಂಟಿ ಕಾರ್ಯದರ್ಶಿಗೌರವ್ ಕಪಾಡಿಯಾ ಹೇಳಿದ್ದಾರೆ.
"ಕಾಫಿ ವಿತ್ ಕರಣ್" ಶೋ ನಲ್ಲಿ ಅನುಚಿತ ಹೇಳಿಕೆ ನೀಡಿದ ಕಾರಣ ಪಾಂಡ್ಯ ಹಾಗೂ ಅವರ ಸಹ ಆಟಗಾರ ಕೆ.ಎಲ್. ರಾಹುಲ್ ರನ್ನು ಅಂತರಾಷ್ಟ್ರೀಯ ಪಂದ್ಯಗಳಿಂದ ಅನಿರ್ದಿಷ್ಟ ಅವಧಿಯವರೆಗೆ ಅಮಾನತುಗೊಳಿಸಲಾಗಿದೆ. ಬಿಸಿಸಿಐ ಈ ಇಬ್ಬರೂ ಆಟಗಾರರಿಗೆ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟ ವಿವರಣೆ ನಿಡಲು ಏಳು ದಿನಗಳ ಕಾಲಾವಕಾಶ ನೀಡುತ್ತದೆ.
ಕರಣ್ ಜೋಹರ್ ನಡೆಸಿಕೊಂಡುವ ಈ ಕಾರ್ಯಕ್ರಮದ ಇತ್ತೀಚಿನ ಕಂತಿನಲ್ಲಿ ರಾಹುಲ್ ಅವರೊಂದಿಗೆ ಭಾಗವಹಿಸಿದ್ದ ಪಾಂಡ್ಯ ಮಹಿಳೆಯರ ಬಗ್ಗೆ ಅಸಭ್ಯ, ಅಶ್ಲೀಲ ಎನ್ನಬಹುದಾದ ಮಾತನ್ನಾಡಿದ್ದರು. ಬಳಿಕ ಪಾಂಡ್ಯ ತಾವು ಸಾಮಾಜಿಕ ಮಾದ್ಯಮಗಳಲ್ಲಿ ತನ್ನ ಮಾತುಗಳಿಗೆ ಕ್ಷಮೆಯಾಚಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos