ಎಂಎಸ್ ಧೋನಿ ಈಗಲೂ ಭಾರತದ ಪಾಲಿಗೆ ಆಪತ್ಬಾಂಧವ: ಯಾಕೆ ಅಂತ ಆಸೀಸ್ ಲೆಜೆಂಡ್ ಬೌಲರ್ ಹೇಳುತ್ತಾರೆ ಕೇಳಿ!
ಆಸ್ಟ್ರೇಲಿಯಾ-ಭಾರತ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿಯ ಅತ್ಯುತ್ತಮ ಬ್ಯಾಟಿಂಗ್ ಭಾರತ ಗೆಲುವಿಗೆ ಸಹಕಾರಿಯಾಗಿದ್ದು, ಮತ್ತೊಮ್ಮೆ ತಾವು ಅದ್ಭುತ ಮ್ಯಾಚ್ ಫಿನಿಷರ್ ಎಂಬುದನ್ನು ಸಾಬೀತುಪಡಿಸಿದ್ದರು.
ಮಹೇಂದ್ರ ಸಿಂಗ್ ಧೋನಿ ಸಮಯೋಚಿತ ಆಟಕ್ಕೆ ಆಸ್ಟ್ರೇಲಿಯಾ ಲೆಜೆಂಡ್ ವೇಗಿ ಜೇಸನ್ ಗಿಲ್ಲೆಸ್ಪಿ ಪ್ರತಿಕ್ರಿಯೆ ನೀಡಿದ್ದು, ಧೋನಿ ಈಗಲೂ ಏಕೆ ಭಾರತದ ಪಾಲಿಗೆ ನಂಬಿಕಸ್ಥ ಬ್ಯಾಟ್ಸ್ ಮನ್ ಎನ್ನುವುದನ್ನು ವಿವರಿಸಿದ್ದಾರೆ.
ಗಿಲ್ಲೆಸ್ಪಿ ಪ್ರಕಾರ ಧೋನಿಗೆ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡುವುದು ತಿಳಿದಿದೆ. ಆದ್ದರಿಂದ ಅವರು ತಂಡಕ್ಕೆ ಈಗಲೂ ನಂಬಿಕಸ್ಥ ಬ್ಯಾಟ್ಸ್ ಎಂದು ಹೇಳಿದ್ದಾರೆ. ಧೋನಿ ಅವರ ಮ್ಯಾಚ್ ಫಿನಿಷಿಂಗ್ ಸಾಮರ್ಥ್ಯದಿಂದ ಭಾರತ ಒಂದು ದಶಕದಿಂದ ಫಲ ಪಡೆದಿದೆ. ಈಗಲೂ ಧೋನಿ ಅವರ ಸಾಮರ್ಥ್ಯದಿಂದ ಭಾರತ ಲಾಭ ಪಡೆಯುತ್ತಿದೆ ಎಂದು ಗಿಲ್ಲೆಸ್ಪಿ ಹೇಳಿದ್ದಾರೆ. ಸಿಡ್ನಿ ಪಂದ್ಯದಲ್ಲೂ ಧೋನಿ ಪರಿಸ್ಥಿತಿಗೆ ತಕ್ಕಂತೆ ಆಡಿದ್ದರು, ಅವರು ಏಕೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಳಗಿನ ಕ್ರಮಾಂಕದಲ್ಲಿ ಬಂದು ಪರಿಸ್ಥಿತಿಗೆ ತಕ್ಕಂತೆ ಆಡುವುದು ಕಷ್ಟ ಎಂದು ಗಿಲ್ಲೆಸ್ಪಿ ಹೇಳಿದ್ದಾರೆ.