ಮೆಲ್ಬೋರ್ನ್: ಎಂಎಸ್ ಧೋನಿ ವಿರುದ್ಧ ಟೀಕೆ ಮಾಡುವ ಮುನ್ನ ಅವರಿಗೂ ಕೊಂಚ ಸಮಯ ನೀಡಬೇಕು, ಧೋನಿ ನೇ ಕ್ರಮಾಂಕದಲ್ಲಿ ಆಡುವುದರಿಂದ ಅವರಿಗೂ ಮತ್ತು ತಂಡಕ್ಕೂ ಲಾಭವಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಎಂಸಿಜಿ ಕ್ರೀಡಾಂಗಣದಲ್ಲಿ ಇಂದು ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಈ ಗೆಲುವಿಗೆ ನಾವು ಅರ್ಹರಾಗಿದ್ದೆವು. ಆಸಿಸ್ ಪ್ರವಾಸಕ್ಕೂ ಮುನ್ನ ಸಾಕಷ್ಟು ತರಬೇತಿ ನಡೆಸಿದ್ದೆವು. ಅಲ್ಲದೆ ಪ್ರವಾಸದ ವೇಳೆಯಲ್ಲೂ ನಾವು ಸಾಕಷ್ಟ ಶ್ರಮಿಸಿದ್ದೆವು. ನಮ್ಮ ಕಠಿಣ ಪರಿಶ್ರಮದ ಫಲವಾಗಿಯೇ ನಮಗೆ ಯಶಸ್ಸು ದೊರೆತಿದೆ. ಮುಂಬರುವ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡೇ ಯೋಜನೆ ರೂಪಿಸುತ್ತಿದ್ದೇವೆ. ಇದರಲ್ಲಿ ಯಶಸ್ಸು ಕೂಡ ಸಾಧಿಸುತ್ತಿದ್ದೇವೆ ಎಂದು ಹೇಳಿದರು.
ಆಸಿಸ್ ನೆಲದಲ್ಲೂ ನಮ್ಮ ಯೋಜನೆ ಯಶಸ್ವಿಯಾಗಿದ್ದು, ಮಳೆಯ ಕಾರಣದಿಂದಾಗಿ ಟಿ20 ಸರಣಿ ಡ್ರಾ ಆಗಿತ್ತು. ಆದರೆ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದಿದ್ದೇವೆ. ನಿಜಕ್ಕೂ ಹಾಲಿ ಆಸಿಸ್ ಪ್ರವಾಸ ಅವಿಸ್ಮರಣೀಯ. ಈ ಯಶಸ್ಸಿನಲ್ಲಿ ಇಡೀ ತಂಡದ ಪರಿಶ್ರಮವಿದೆ. ನಿಜಕ್ಕೂ ಈ ಬಲಿಷ್ಟ ತಂಡದಲ್ಲಿ ನಾನೂ ಕೂಡ ಓರ್ವ ನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಧೋನಿ ಬ್ಯಾಟಿಂಗ್ ಕುರಿತು ಮಾತನಾಡಿದ ಕೊಹ್ಲಿ, ಬ್ಯಾಟಿಂಗ್ ನಲ್ಲಿ ಧೋನಿಗೆ ಅವರೇ ಸಾಟಿ.. ನಿಜಕ್ಕೂ ಚಾಣಾಕ್ಷ ಅವರು. ಸಂದರ್ಭಕ್ಕೆ ತಕ್ಕಂತೆ ಆಡುತ್ತಾರೆ. ಎಂಸಿಜಿ ಬ್ಯಾಟಿಂಗ್ ಸ್ನೇಹಿ ಪಿಚ್ ಅಲ್ಲ. ಆದರೂ ಇಲ್ಲಿ ಸಂದರ್ಭಕ್ಕೆ ತಕ್ಕಂತೆ ಆಡುವುದು ಧೋನಿ ಅವಲ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಎಂಎಸ್ ಧೋನಿ ವಿರುದ್ಧ ಟೀಕೆ ಮಾಡುವ ಮುನ್ನ ಅವರಿಗೂ ಕೊಂಚ ಸಮಯ ನೀಡಬೇಕು, ಧೋನಿ ನೇ ಕ್ರಮಾಂಕದಲ್ಲಿ ಆಡುವುದರಿಂದ ಅವರಿಗೂ ಮತ್ತು ತಂಡಕ್ಕೂ ಲಾಭವಿದೆ ಎಂದು ಹೇಳಿದರು.
ಅಂತೆಯೇ ಜಾದವ್ ಕೂಡ ಉತ್ತಮ ಸಾಥ್ ನೀಡಿದರು. ಬೌಲಿಂಗ್ ವೇಳೆ ಚಹಲ್ ಮಾರಕ ದಾಳಿ ನಮಗೆ ಮೇಲುಗೈ ಸಾಧಿಸುವಂತೆ ಮಾಡಿತು. ಆಸಿಸ್ ನೆಲದಲ್ಲಿ 6 ವಿಕೆಟ್ ಪಡೆಯುವುದು ಸುಲಭದ ಮಾತಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಯಶಸ್ಸಿನಲ್ಲಿ ತಂಡದ ಸಹಾಯಕ ಕೋಚ್ ಗಳು, ಸಿಬ್ಬಂದಿಗಳ ಪಾಲು ದೊಡ್ಡದು
ಇದೇ ವೇಳೆ ತಂಡದ ಸಹಾಯಕ ಕೋಚ್ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ ಕೊಹ್ಲಿ, ಬ್ಯಾಟಿಂಗ್ ನಲ್ಲಿ ಸಂಜಯ್ ಬಂಗಾರ್ ಸಾಕಷ್ಟು ನೆರವು ನೀಡಿದರು. ಬ್ಯಾಟಿಂಗ್ ತಂತ್ರಗಾರಿಕೆ, ಆಸಿಸ್ ಪಿಚ್ ಗಳ ಮರ್ಮದ ಕುರಿತು ಸಾಕಷ್ಟು ತರಬೇತಿ ನೀಡಿದರು. ತಂಡದ ಈ ಯಶಸ್ಸಿನಲ್ಲಿ ಸಿಂಹ ಪಾಲು ಸಹಾಯಕ ಕೋಚ್ ಗಳು, ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics