ಕ್ರಿಕೆಟ್

ಧೋನಿ ಆಪತ್ಬಾಂಧವ ಎಂಬುದು ಮತ್ತೆ ಸಾಬೀತು: ಭಾರತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದಿತು!

Srinivas Rao BV
ಮೆಲ್ಬೋರ್ನ್: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಪಾಲಿಗೆ ಆಪತ್ಬಾಂಧವ ಎಂಬುದನ್ನು ಸಾಬೀತುಪಡಿಸಿದ್ದಾರೆ. 
ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 3 ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 231 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಎದುರಿಸಿ ತೀವ್ರ ಸಂಕಷ್ಟದಲ್ಲಿ ಸಿಲುಕಿತ್ತು. ಅತ್ಯಂತ ನಂಬಿಕಸ್ಥ ಬ್ಯಾಟ್ಸ್ ಮನ್ ಆಗಿದ್ದ ವಿರಾಟ್ ಕೊಹ್ಲಿ ಸಹ 46 ರನ್ ಗಳಿಸಿ ಪೆವಿಲಿಯನ್ ನತ್ತ ನಡೆದಾಗ ಭಾರತದ ಗೆಲುವಿನ ಆಸೆ ಬಹುತೇಕ ಕಮರಿಹೋಗಿತ್ತು. ಕೊಹ್ಲಿಗೂ ಉತ್ತಮ ಜೊತೆಯಾಟ ನೀಡಿದ್ದ ಮಹೇಂದ್ರ ಸಿಂಗ್ ಧೋನಿ ಒನ್ ಮ್ಯಾನ್ ಆರ್ಮಿಯಾಗಿ ಭಾರತ ಕೈಚೆಲ್ಲುತ್ತಿದ್ದ ಪಂದ್ಯವನ್ನು ಮತ್ತೆ ಗೆಲುವಿನ ಹಳಿಗೆ ತಂದು ನಿಲ್ಲಿಸಿದರು. ಈ ಹಂತದಲ್ಲಿ ಕೇದಾರ್ ಜಾಧವ್ ಸಹ ಧೋನಿಗೆ ಉತ್ತಮ ಸಾಥ್ ನೀಡಿದರು. 
ಶಿಖರ್ ಧವನ್, ರೋಹಿತ್ ಶರ್ಮಾ, ಕೊಹ್ಲಿ ಸೇರಿದಂತೆ ಆರಂಭಿಕ ಆಟಗಾರರನ್ನು ಸುಲಭವಾಗಿ ನಿಯಂತ್ರಿಸಿದ್ದ ಆಸ್ಟ್ರೇಲಿಯಾ ಬೌಲರ್ ಗಳಿಗೆ ಧೋನಿ ಹಾಗೂ ಕೇದಾರ್ ಜಾಧವ್ ಅವರ ಜೊತೆಯಾಟವನ್ನು ಮುರಿಯುವುದಕ್ಕೆ ಸಾಧ್ಯವಾಗಲಿಲ್ಲ. ಧೋನಿ-ಕೇದಾರ್ ಜಾಧವ್ ಜೊತೆಯಾಟದ ಪರಿಣಾಮ ಭಾರತ 3 ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಜಯ ಗಳಿಸಿದೆ.
SCROLL FOR NEXT